ಯಲ್ಲಾಪುರ : ಶಾಲೆಗಳಿಗೆ ಸೂಕ್ತ ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ಸರಕಾರದ್ದಾದರೆ, ಸಂಸ್ಕಾರಯುತ ಗುಣಮಟ್ಟದ ಶಿಕ್ಷಣ ಒದಗಿಸುವ ಜವಾಬ್ದಾರಿಯನ್ನು ಪಾಲಕರು ಮತ್ತು ಶಿಕ್ಷಕರು ಹೊರಬೇಕಾಗಿದೆ ಎಂದು ಕಾರ್ಮಿಕ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು,
ಅವರು ತಾಲೂಕಿನ ಮಳಲಗಾಂವ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿವೇಕ ಕೊಠಡಿ ಯೋಜನೆ 2022-23ರ ಅಡಿಯಲ್ಲಿ ಮಂಜೂರಾದ ಎರಡು ನೂತನ ಕೊಠಡಿಗಳ ಅಡಿಗಲ್ಲು ಪೂಜೆ ಹಾಗೂ ಈ ವರ್ಷದ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು,
ಪ್ರಾಸ್ತವಿಕವಾಗಿ ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ಆರ್.ಎಸ್ ಭಟ್, ಶಾಸಕರ ಈವರಿಗಿನ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿ ಅಭಿನಂದಿಸಿದರು,
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್ ಹೆಗಡೆ ಮಾತನಾಡಿ, ಶಾಲಾ ಭೌತಿಕ ಅಭಿವೃದ್ಧಿ ಹಾಗೂ ಮಗುವಿನ ಗುಣಾತ್ಮಕ ಶಿಕ್ಷಣಗಳೆರಡು ಒಂದು ವಾಹನದ ಎರಡು ಚಕ್ರಗಳಿದ್ದಂತೆ, ಇವೆರಡೂ ಸುಗಮವಾಗಿ ಸಾಗಿದ್ದಲ್ಲಿ ಮಾತ್ರ ಶೈಕ್ಷಣಿಕ ಕ್ಷೇತ್ರದ ಪ್ರಗತಿ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ನೇತ್ರಾವತಿ ಹೆಗಡೆ ಶುಭ ಕೋರಿದರು, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶಾಲಾ ಎಸ್‌ಡಿಎಂಸಿ, ಶಿಕ್ಷಕರು ಹಾಗೂ ಸಮಸ್ತ ಊರವರ ವತಿಯಿಂದ ಸಚಿವರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸನ್ಮಾನಿಸಿದರು.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಂಬಾರ, ಕಾರ್ಯನಿರ್ವಾಹಕ ಇಂಜಿನಿಯರ ಅಶೋಕ್ ಬಂಟ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀರಾಮ ಹೆಗಡೆ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜೇಶ್ ಶೇಟ್, ಶಾಲಾ ಮುಖ್ಯೋಧ್ಯಾಪಕಿ ಸುಜಾತ ನಾಯ್ಕ, ಶಿಕ್ಷಕಿ ಲತಾ ತಳೇಕರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ್ ಭಾಗವತ್, ಉಪಾಧ್ಯಕ್ಷ ಶ್ರೀಕಾಂತ್ ಭಾಗವತ್ ಮಾತನಾಡಿದರು.
ಬಿಇಓ ಎನ್ ಆರ್ ಹೆಗಡೆ ಸ್ವಾಗತಿಸಿದರು, ಸಿ ಆರ್ ಪಿ ಗಳಾದ ಕೆ ಆರ್ ನಾಯಕ ವಂದಿಸಿದರು. ಶಿಕ್ಷಕ ರಾಘವೇಂದ್ರ ಹೊನ್ನಾವರ ಕಾರ್ಯಕ್ರಮ ನಿರ್ವಹಿಸಿದರು.