ಹೊನ್ನಾವರ: ಶರಾವತಿ ಸೇತುವೆ ಮೇಲೆ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ.
ಸೋಮವಾರ ಮುಂಜಾನೆ 1 ಗಂಟೆಯಿಂದ 2 ಗಂಟೆಯ ನಡುವಿನ ಅವಧಿಯಲ್ಲಿ ಅಪರಿಚಿತ ವಾಹನವೊಂದು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದು ಶರಾವತಿ ಸೇತುವೆಯ ಮೇಲೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದವನಿಗೆ ಡಿಕ್ಕಿಪಡಿಸಿ ವಾಹನ ನಿಲ್ಲಿಸದೇ ಪರಾರಿಯಾದ ಘಟನೆ ನಡೆದಿದೆ. ವಾಹನ ಡಿಕ್ಕಿಯಾದ ಪರಿಣಾಮ ಪಟ್ಟಣದ ಬಜಾರ ರೋಡ್ ನಿವಾಸಿಯಾದ ಕಾರ್ತಿಕ್ ಶೇಟ್ ಇವರ ತಲೆಯ ಭಾಗಕ್ಕೆ ಗಂಭೀರ ಗಾಯ ಸಂಭವಿಸಿದ ಕಾರಣ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೆ ಸಾವು
