Slide
Slide
Slide
previous arrow
next arrow

ಡಿ.10,11 ಶಿರಸಿಯಲ್ಲಿ ಅರಣ್ಯವಾಸಿಗಳ ರಾಜ್ಯಮಟ್ಟದ ಬೃಹತ್ ರ‍್ಯಾಲಿ

300x250 AD

ಸಿದ್ಧಾಪುರ: ಅರಣ್ಯವಾಸಿಗಳ ಸಮಸ್ಯೆ ಸಮಗ್ರ ಕ್ರೋಢೀಕರಿಸಿ ಅರಣ್ಯವಾಸಿಗಳ ಹಿತ ಕಾಪಾಡುವ ಮತ್ತು ಭೂಮಿ ಹಕ್ಕಿಗೆ ಆಗ್ರಹಿಸಿ ಡಿಸೆಂಬರ್ 10 ಮತ್ತು 11 ರಂದು ಶಿರಸಿಯಲ್ಲಿ ರಾಜ್ಯಮಟ್ಟದ ಬೃಹತ್ ಅರಣ್ಯವಾಸಿಗಳ ರ‍್ಯಾಲಿ ಸಂಘಟಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

 ಅವರು ನ. 12 ರಂದು ಸಿದ್ಧಾಪುರ ತಾಲೂಕಿನ ಹಲಗೇರಿ ಗ್ರಾಮ ಪಂಚಾಯತ ವ್ಯಾಪ್ತಿ ಬಸವೇಶ್ವರಿ ದೇವಾಲಯದ ಆವರಣದಲ್ಲಿ ಜರುಗಿದ ಅರಣ್ಯವಾಸಿಗಳ ಜಾಗೃತ ಕಾರ್ಯಗಾರದಲ್ಲಿ ಅರಣ್ಯವಾಸಿಗಳನ್ನ ಉದ್ದೇಶಿಸಿ ಮಾತನಾಡಿದರು.

 ಅರಣ್ಯವಾಸಿಗಳ ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರ ನೀಡುವಲ್ಲಿ ಉಂಟಾದ ವೈಫಲ್ಯದಿಂದ ಇಂದು ಅರಣ್ಯವಾಸಿಗಳು ಅತಂತ್ರರಾಗುವ ಸಂದರ್ಭ ಬಂದೊದಗಿದೆ.ಆದ್ದರಿಂದ ಸಂಘಟನಾತ್ಮಕ ಮತ್ತು ಕಾನೂನಾತ್ಮಕ ಹೋರಾಟ ಮುಂದುವರೆಸಲಾಗುವುದು ಎಂದು ಅವರು ಹೇಳಿದರು.

300x250 AD

ಸಮಸ್ಯೆಗಳ ಸರಮಾಲೆ:
 ಅರಣ್ಯ ಹಕ್ಕು ಕಾಯಿದೆ ಜಾರಿಯಾಗಿ 15 ವರ್ಷಗಳಾದರೂ ಅನುಷ್ಠಾನದಲ್ಲಿ ವೈಫಲ್ಯ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಅರಣ್ಯಾಧಿಕಾರಿಗಳ ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆ ಮುಂದುವರಿಕೆ, ಒಕ್ಕಲೆಬ್ಬಿಸಲು ನಿರಂತರ ಕಾನೂನು ಪ್ರಕ್ರಿಯೆ ಹೀಗೆ ಅರಣ್ಯವಾಸಿಗಳು ನಿರಂತರ ಸಮಸ್ಯೆಗಳ ಸರಮಾಲೆಯನ್ನು ಎದುರಿಸುತ್ತಿದ್ದಾರೆ ಎಂದು ರವೀಂದ್ರ ನಾಯ್ಕ ಹೇಳಿದರು.

 ಸಭೆಯಲ್ಲಿ ಮಾರುತಿ ನಾಯ್ಕ ಪ್ರಾಸ್ತಾವಿಕ ಭಾಷಣ ಮಾಡಿದರು. ಕೃಷ್ಣಪ್ಪ ನಾಯ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಜಯಂತ ನಾಯ್ಕ ಹೆಜನಿ, ಲಾರ್ಲ ಲೂಯಿಸ್ ಮಾವಿನಗುಂಡಿ, ಜಗದೀಶ್ ನಾಯ್ಕ ಚಂದ್ರಘಟಕಿ, ರಾಮಕೃಷ್ಣ ನಾಯ್ಕ ಹಲಗೇರಿ, ವಿನಾಯಕ ನಾಯ್ಕ, ವಿ ಆರ್ ನಾಯ್ಕ ಹಲಗೇರಿ, ಪರಮೇಶ್ವರ ಗೌಡ ನಿಪ್ಲಿ, ಜಫಾರಸಾಬ ಹಲಗೇರಿ, ಗೀತಾ ಆಚಾರಿ ಹಲಗೇರಿ, ಅಣ್ಣಪ್ಪ ಗೊಂಡ ಪಡವನಬೈಲ್ ಮುಂತಾದವರು ಮಾತನಾಡಿದರು. ವಿನಾಯಕ ನಾಯ್ಕ ಹಲಸಿನಮನೆ ಸ್ವಾಗತಿಸಿದರು.

Share This
300x250 AD
300x250 AD
300x250 AD
Back to top