Slide
Slide
Slide
previous arrow
next arrow

‘ಯಕ್ಷಗಾನ’ ಸಂಗೀತ, ಜಾನಪದ ಕಲೆಗಳ ಸಮ್ಮಿಶ್ರಣ: ಪ್ರಸನ್ನನಾಥ ಸ್ವಾಮೀಜಿ

300x250 AD

ಹೊನ್ನಾವರ: ಯಕ್ಷಗಾನ ಅದ್ಭುತವಾದ ಕಲೆ, ಇವತ್ತಿನ ದಿನಮಾನಗಳಲ್ಲಿ ಪ್ರಸ್ತುತ ಕರ್ನಾಟಕದಲ್ಲಿ ನಮ್ಮ ಕಲೆ ಯಾವುದಾದರೂ ಇದ್ದರೆ ನಾವು ಯಕ್ಷಗಾನವನ್ನು ಹೇಳುತ್ತೇವೆ. ಯಕ್ಷಗಾನ ಈ ಕರಾವಳಿಯ ಭಾಗದ ಆಟ ಆಗಿದ್ದರೂ ಸಹ, ಅದು ತೆೆಂಕುತಿಟ್ಟಿರಬಹುದು, ಬಡಗುತಿಟ್ಟಿರಬಹುದು. ಹಾಗೇ ನಾವು ಮಂಡ್ಯ, ಮೈಸೂರು ಆ ಭಾಗಕ್ಕೆ ಹೋದರೆ ಮೂಡಲಪಾಯ ಯಕ್ಷಗಾನವನ್ನು ನೋಡುವುದಕ್ಕೆ ಸಾಧ್ಯತೆ ಇದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ನುಡಿದರು.
ಅವರು ಹೊಸಪಟ್ಟಣ ಚಂದ್ರಹಾಸ ಗೌಡರ 15 ವರ್ಷದ ಯಕ್ಷಯಾನದ ‘ಯಕ್ಷಚಂದ್ರ ಪಂಚದಶೀ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನ ಸಂಗೀತದ್ದು ಅಂದರೂ ಹೌದು. ಅಥವಾ ಜಾನಪದ ಕಲೆ ಅಂದರೂ ಹೌದು, ಇದು ಸಮ್ಮಿಶ್ರಿತ. ಎರಡೂ ಇದೆ ಕಾಣುವುದಕ್ಕೆ. ಒಂದು ಕಡೆ ಹಾಡನ್ನು ಕೇಳಿದಾಗ ಇದು ಶಾಸ್ತ್ರೀಯ ಇರಬಹುದು ಅನಿಸುತ್ತೆ. ಕುಣಿತ ಮತ್ತು ಅದರಲ್ಲಿ ನರ್ತನ ನೋಡಿದ ತಕ್ಷಣ ಅನಿಸುತ್ತೆ ಇದು ಎಲ್ಲೋ ಒಂದು ಕಡೆ ಜಾನಪದಕ್ಕೆ ಸೇರಿದ ಕಲೆ ಎಂದರು.
ಚಂದ್ರಹಾಸ ಗೌಡ ತನ್ನ 15 ವರ್ಷದ ಯಕ್ಷ ಪಯಣಕ್ಕೆ ಅದ್ಭುತವಾದ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಊರಿನ ಹಿರಿಯರನ್ನು, ತನಗೆ ದಾರಿ ತೋರಿದ ಗುರುಗಳನ್ನು ಗುರುತಿಸಿ ಉತ್ತಮವಾದ ಕಾರ್ಯ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೀಲಗೋಡ ಯಕ್ಷೀ ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ಮಾದೇವ ಸ್ವಾಮೀ ಮಾತನಾಡಿ ಚಂದ್ರಹಾಸ ಗೌಡ ಯಕ್ಷಗಾನದ ಮೂಲಕ ತನ್ನ ಊರಿನ ಹೆಸರನ್ನು ಎತ್ತರಕ್ಕೆ ಏರಿಸಿದ್ದಾರೆ ಎಂದರು.
ಮಾಜಿ ಜಿ.ಪಂ. ಸದಸ್ಯ ಕೃಷ್ಣ ಗೌಡ ಮಾತನಾಡಿ, ಯಕ್ಷ ರಂಗದ ಸಿಡಿಲು ಮರಿ, ಅವರ ಅಭಿನಯ ನೋಡುವುದೇ ಚೆಂದ, ತನ್ನ ಯಕ್ಷ ಪಯಣದ ಸವಿ ನೆನಪಿನ ಕಾರ್ಯಕ್ರಮದಲ್ಲಿ ಹಿರಿಯರನ್ನು, ತನಗೆ ಸಹಕಾರ ನೀಡಿದವರನ್ನು ಗುರುತಿಸುವ ಕೆಲಸ ಮಾಡಿದ್ದಾರೆ ಅವರ ಮುಂದಿನ ಯಕ್ಷ ಪಯಣ ಯಶಸ್ಸುಗೊಳ್ಳಲಿ ಎಂದರು.
ವೇದಿಕೆಯಲ್ಲಿದ್ದ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಕೆಳಗಿನೂರು ವಿ.ಎಸ್.ಎಸ್ ಅಧ್ಯಕ್ಷ ಗಣಪ್ಪಯ್ಯ ಗೌಡ ಮುಗಳಿ, ಡಾ. ರಾಜೇಶ್ ಕಿಣಿ, ಉದ್ಯಮಿ ಅಯ್ಯಪ್ಪ ನಾಯ್ಕ, ಗ್ರಾ. ಪಂ. ಅಧ್ಯಕ್ಷ ಮಂಜು ಮಾತನಾಡಿದರು. ಮಿರ್ಜಾನ ಮಠದ ಬ್ರಹ್ಮಚರ್ಯ ನಿಶ್ಚಲನಂದನಾಥ ಸ್ವಾಮೀಜಿ, ಮಾಜಿ ತಾ. ಪಂ. ಸದಸ್ಯ ರಾಜು ನಾಯ್ಕ ಮಂಕಿ, ಶ್ರೀನಾಥ್ ಪೂಜಾರಿ ಜಿನ್ನೋಡ ಉಪಸ್ಥಿತರಿದ್ದರು. ಕ ಸಾ ಪ ಅಧ್ಯಕ್ಷ ಎಸ್. ಎಚ್. ಗೌಡ ಸ್ವಾಗತಿಸಿದರು. ಶಂಕರ ಗೌಡ ಹುಡ್ಕನಿ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಊರಿನ ಹಿರಿಯರನ್ನು, ಚಂದ್ರಹಾಸ ಗೌಡರ ಕಲಾ ಬೆಳವಣಿಗೆಯಲ್ಲಿ ಮಾರ್ಗದರ್ಶನ ಮಾಡಿದವರನ್ನು ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಅದ್ದೂರಿ ಕಾರ್ಯಕ್ರಮಕ್ಕೆ ಸಾವಿರಾರು ಪ್ರೇಕ್ಷಕರು ಸಾಕ್ಷಿಯಾದರು. ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.

300x250 AD
Share This
300x250 AD
300x250 AD
300x250 AD
Back to top