Slide
Slide
Slide
previous arrow
next arrow

ಮರಗಳ ತುಂಡು ಸಾಗಾಟ; ಏಳು ಮಂದಿಯ ಬಂಧನ

300x250 AD

ಹೊನ್ನಾವರ: ತಾಲೂಕಿನ ಮಂಕಿ ಅರಣ್ಯ ವಲಯ ವ್ಯಾಪ್ತಿಯ ಹಡಿಕಲ್ ಅರಣ್ಯ ಪ್ರದೇಶದಲ್ಲಿ ಸಾಗವಾನಿ ಮತ್ತು ಭರಣಗಿ ಮರ ಕಡಿದು ತುಂಡುಗಳನ್ನು ತಯಾರಿಸಿ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ಮಾಲು ಸಮೇತ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ.
ಹೊನ್ನಾವರ ವಿಭಾಗ, ಭಟ್ಕಳ ಉಪವಿಭಾಗದ ವ್ಯಾಪ್ತಿಯಲ್ಲಿ ಅಕ್ರಮ ನಾಟಾ ಸಾಗಾಟ ನಡೆದಿದ್ದು, ಆರೋಪಿಗಳಾದ ಹಡಿಕಲ್ ನಿವಾಸಿ ನಾಗರಾಜ ನಾಯ್ಕ, ಚಿತ್ತಾರದ ಸಂದೀಪ ನಾಯ್ಕ, ಕೆಳಗಿನ ಇಡಗುಂಜಿಯ ಗಂಗಾಧರ ಆಚಾರಿ, ನೇಸಲ್‌ನೀರ್ ಸಂದೀಪ ನಾಯ್ಕ, ಗೌರೀಶ ನಾಯ್ಕ, ಪ್ರವೀಣ ನಾಯ್ಕ ಮತ್ತು ಅಡಿಕೆಕುಳಿ ಪ್ರಕಾಶ ಗೌಡ ಎನ್ನುವವರನ್ನು ದಸ್ತಗಿರಿ ಮಾಡಿ ಬಂಧಿಸಿದ್ದಾರೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ ವಾಹನ ವಶಪಡಿಸಿಕೊಳ್ಳಲಾಗಿದೆ. ಕಳೆದ ಒಂದು ತಿಂಗಳ ಹಿಂದೆಯಷ್ಟೆ ಕೆಳಗಿನ ಇಡಗುಂಜಿಯ ರಥ ಶಿಲ್ಪಿ ಗಂಗಾಧರ ಆಚಾರಿ ಇವರ ಕಟ್ಟಿಗೆ ಗೋಡೌನಿನಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಸಾಗವಾನಿ ಕಟ್ಟಿಗೆಗಳನ್ನು ಜಪ್ತಿ ಪಡಿಸಲಾಗಿದ್ದು. ಈ ಪ್ರಕರಣದಲ್ಲಿಯೂ ಸಹ ಇವರ ಗೋಡೌನಿನಲ್ಲಿ ಅಕ್ರಮ ಕಟ್ಟಿಗೆಗಳು ಕಂಡು ಬಂದು ಜಪ್ತಿಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಡಿಸಿಎಫ್ ರವಿಶಂಕರ, ಎಸಿಎಫ್ ಕೆ.ಟಿ.ಬೋರಯ್ಯ, ಆರ್‌ಎಫ್‌ಓ ಸವಿತಾ ಆರ್.ದೇವಾಡಿಗ, ಡಿಆರ್‌ಎಫ್‌ಓ ಶಿವಾನಂದ ಇಂಚಲ, ಯೋಗೇಶ ಮೊಗೇರ, ಮಹಾದೇವ ಮಡ್ಡಿ, ಸಂದೀಪ ಎಸ್.ಅರ್ಕಸಾಲಿ, ಮಂಜುನಾಥ ನಾಯ್ಕ, ಜಿ. ಸಂತೋಷ, ಷಣ್ಮುಖ ಹವಳಗಿ, ಲೋಹಿತ್ ನಾಯ್ಕ, ರೇಷ್ಮಾ ಜಿ.ನಾಯ್ಕ, ಅರಣ್ಯ ರಕ್ಷಕರಾದ ಮಹಾಬಲ ಗೌಡ, ಶಿವಾನಂದ ಪೂಜಾರಿ, ಸುರೇಂದ್ರನಾಥ ನಾಯ್ಕ ದೇವೇಂದ್ರ ಗೊಂಡ, ಬಸವರಾಜ ಲಮಾಣಿ, ಬಸಯ್ಯ ಸಂಕಣ್ಣವರ, ರಾಮ ನಾಯ್ಕ, ವಿನಾಯಕ ನಾಯ್ಕ ಇದ್ದರು.

300x250 AD
Share This
300x250 AD
300x250 AD
300x250 AD
Back to top