ಶಿರಸಿ: ಕಲ್ಲು ತುಂಬಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಓರ್ವ ಗಾಯಗೊಂಡ ಘಟನೆ ತಾಲೂಕಿನ ಇಸಳೂರು ಬಳಿ ನಡೆದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೃಷರವೊಂದರಿಂದ ಬೊಡ್ರಾಸ್ ಕಲ್ಲನ್ನ ತುಂಬಿಕೊಂಡು ಶಿರಸಿಯ ಆರ್.ಎನ್.ಎಸ್‌ಗೆ ಬರಲಾಗುತ್ತಿತ್ತು. ಅದರೆ ಇಸಳೂರು ಬಳಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಗ್ರಾಮಿಣ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಲ್ಲು ತುಂಬಿದ್ದ ಟಿಪ್ಪರ್ ಪಲ್ಟಿ: ಓರ್ವನಿಗೆ ಗಾಯ
