Slide
Slide
Slide
previous arrow
next arrow

‘ಕಥಾಸಾಗರಿ’ ಕೃತಿ ವಾಸ್ತವಕ್ಕೆ ಹತ್ತಿರವಾಗಿದ್ದು, ಮಕ್ಕಳಿಗೆ ಸುಲಭದಲ್ಲಿ ಅರ್ಥವಾಗುವಂತಿದೆ: ಮೀನಾ ಎಚ್.ವಿ.

300x250 AD

ಶಿರಸಿ: ಸಾಹಿತ್ಯಕ್ಕೆ ತನ್ನದೆ ಆದ ವಿಶೇಷತೆ ಇದೆ.ಸಮಾಜಕ್ಕೆ ಸಾಹಿತ್ಯ ಕ್ಷೇತ್ರದ ಕೊಡುಗೆ ಅಪಾರವಾಗಿದೆ ಎಂದು ಶ್ರೀಕುಮಾರ ಸಮೂಹ ಸಂಸ್ಥೆಯ ಮಾಲೀಕ ವೆಂಕಟ್ರಮಣ ಹೆಗಡೆ ಕವಲಕ್ಕಿ ಹೇಳಿದರು.
ಅವರು ಶುಕ್ರವಾರ ನಗರದ ಅಪೋಲೋ ಇಂಟರ್ನ್ಯಾಷನಲ್ ಹೊಟೇಲ್’ನಲ್ಲಿ ನಡೆದ ನಾಗವೇಣಿ ಹೆಗಡೆ ಹೆಗ್ಗರ್ಸಿಮನೆಯವರ ‘ಕಥಾಸಾಗರಿ’ ಕೃತಿ ಅನಾವರಣ ಹಾಗೂ ಕವನಗಾಯನ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಗವೇಣಿ ಹೆಗಡೆ ಹೆಗ್ಗರ್ಸಿಮನೆಯವರ ಕಥಾಸಾಗರಿ ಕೃತಿ ಬಹಳ ಸುಂದರವಾಗಿ ಮೂಡಿಬಂದಿದೆ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಕೃತಿ ಮೂಡಿಬಂದಿದೆ. ಕಥಾಸಾಗರಿ ಕೃತಿಗೆ ಓದುಗರಿಂದ ಬೆಂಬಲ ವ್ಯಕ್ತವಾಗಲಿ ಎಂದರು.
ಕೃತಿ ಅನಾವರಣಗೊಳಿಸಿ ಮಾತನಾಡಿದ ಮಕ್ಕಳ ಸಾಹಿತಿ ಹಾಗೂ ಲೇಖಕಿ ಮೀನಾ ಎಚ್.ವಿ. ಕಥಾಸಾಗರಿ ಕೃತಿ ಬಹಳ ಸುಂದರವಾಗಿ ಮೂಡಿಬಂದಿದೆ . ಸಧ್ಯದ ವಾತಾವರಣಕ್ಕೆ ಹತ್ತಿರವಾದಂತಹ ಅಂಶಗಳು ಕೃತಿಯಲ್ಲಿ ಮೂಡಿಬಂದಿದೆ. ಮಕ್ಕಳಲ್ಲಿ ಓದುವ ಹವ್ಯಾಸ ಬರಬೇಕು.ಆಗ ಮಕ್ಕಳಲ್ಲಿ ಮೌಲ್ಯಗಳು ಸಂಸ್ಕೃತಿಗಳು ಬೆಳೆಯುತ್ತದೆ. ಮಕ್ಕಳಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿದೆ. ಆದ್ದರಿಂದ ಪೋಷಕರು ಮಕ್ಕಳಿಗೆ ಕನ್ನಡ ಭಾಷೆಯ ಕುರಿತು ಅರಿವುವನ್ನು ಮೂಡಿಸುವ ಅವಶ್ಯಕತೆ ಸಾಕಷ್ಟಿದೆ.ಮಕ್ಕಳಿಗೆ ಕಥಾಸಾಗರಿ ಕೃತಿ ಬಹಳ ಅನುಕೂಲವಾಗಲಿದೆ.
ಮಕ್ಕಳಿಗೆ ಚಿಕ್ಕಂದಿನಿಂದಲೆ ಜೀವನದ ಜವಾಬ್ದಾರಿಗಳನ್ನು ತಿಳಿಸುವ ಕಾರ್ಯ ಪೋಷಕರಿಂದ ಆಗಬೇಕು. ಆಗ ಮಕ್ಕಳು ಜೀವನದಲ್ಲಿ ದಾರಿ ತಪ್ಪುವ ಸಾಧ್ಯತೆಗಳು ಕಡಿಮೆ ಆಗುತ್ತದೆ. ನಾಗವೇಣಿ ಹೆಗಡೆ ಹೆಗ್ಗರ್ಸಿಮನೆ ಅವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ ಎಂದರು.
ಕಥಾಸಾಗರಿ ಕೃತಿಯ ಲೇಖಕಿ ನಾಗವೇಣಿ ಹೆಗಡೆ ಹೆಗ್ಗರ್ಸಿಮನೆ ಮಾತನಾಡಿ, ಕಥಾಸಾಗರಿ ಕೃತಿ ನನ್ನ ಐದನೇ ಕೃತಿಯಾಗಿದೆ. ನನ್ನ ಐದನೇ ಕೃತಿ ಕಥಾಸಾಗರಿಗೆ ಬಹಳ ಬೆಂಬಲ ವ್ಯಕ್ತವಾಗುತ್ತಿರುವುದು ಸಂತಸ ತಂದಿದೆ.
ಮಕ್ಕಳಿಗೆ ಓದುವ ಹವ್ಯಾಸವನ್ನು ಬೆಳೆಸುವುದು ಪಾಲಕರ ಜವಾಬ್ದಾರಿಯಾಗಿದೆ. ಮಕ್ಕಳ ಕೃತಿಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಬರೆಯಬೇಕಾಗುತ್ತದೆ. ಸ್ವಲ್ಪ ಎಡವಿದರೂ ಮಕ್ಕಳ ಮೇಲೆ ಪರಿಣಾಮ ಬೀಳುವ ಸಾಧ್ಯತೆಗಳಿರುತ್ತದೆ. ಕಥಾಸಾಗರಿ ಕೃತಿಯಲ್ಲಿ ಮಕ್ಕಳ ಮನಮುಟ್ಟುವಂತಹ‌ ಕಥೆಗಳಿವೆ. ಮಕ್ಕಳೂ ಸಹ ಲೇಖನಗಳನ್ನು ಬರೆಯುವ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು ಎಂದರು.

ಅಶೋಕ ಹೆಗಡೆ ಬೊಮ್ಮನಳ್ಳಿ ಮಾತನಾಡಿ ಲೇಖಕಿ ನಾಗವೇಣಿ ಹೆಗಡೆ ಹೆಗ್ಗರ್ಸಿಮನೆಯವರು ಬಹಳ ಕಷ್ಟದ ಜೀವನವನ್ನು ಅನುಭವಿಸಿ ಇಂದು ಶ್ರೇಷ್ಠ ಬರಹಗಾರ್ತಿಯಾಗಿ ಹೋರಹೊಮ್ಮಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ನಾಗವೇಣಿ ಹೆಗಡೆ ಹೆಗ್ಗರ್ಸಿಮನೆಯವರ ಲೇಖನಗಳು ಬಹಳ ಸುಂದರವಾಗಿ ಮೂಡಿಬರುತ್ತವೆ. ಸಾಮಾನ್ಯರಿಗೂ ಸ್ಪಷ್ಟವಾಗಿ ಅರ್ಥವಾಗುವಂತೆ ಹಾಗೂ ಮನಮುಟ್ಟುವಂತೆ ಬರೆಯುವ ಕಲೆ ಅವರಲ್ಲಿದೆ . ಕಥಾ ಸಾಗರಿ ಕೃತಿ ಅವರ ಐದನೇ ಕೃತಿಯಾಗಿದ್ದು ಸಾಹಿತ್ಯ ಕ್ಷೇತ್ರದಲ್ಲಿ ನಾಗವೇಣಿ ಹೆಗಡೆ ಹೆಗ್ಗರ್ಸಿಮನೆ ಹೆಸರು ಮುಗಿಲೆತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

300x250 AD

ಗೋಳಿ ಶಾಲೆಯ ಶಿಕ್ಷಕ ಮಂಜಪ್ಪ ಮಾತನಾಡಿ ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿ ನಾಗವೇಣಿ ಹೆಗಡೆ ಹೆಗ್ಗರ್ಸಿಮನೆಯವರ ಕಥಾಸಾಗರಿ ಕೃತಿಗೆ ಓದುಗರಿಂದ ಜನಮನ್ನಣೆ ವ್ಯಕ್ತವಾಗುವುದರ ಜೊತೆಗೆ ಲೇಖಕಿಯಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಶಿರಸಿ ತಾಲೂಕಾಧ್ಯಕ್ಷ ಜಿ ಸುಬ್ರಾಯ ಭಟ್ ಬಕ್ಕಳ ನಾಗವೇಣಿ ಹೆಗಡೆ ಹೆಗ್ಗರ್ಸಿಮನೆ, ತಮ್ಮದೇ ಆದ ಶೈಲಿಯಲ್ಲಿ ಕೃತಿಗಳನ್ನು ರಚಿಸುವುದರಲ್ಲಿ ಎತ್ತಿದ ಕೈ. ಓದುಗರ ಮನಮುಟ್ಟುವಂತೆ ಕೃತಿಗಳನ್ನು ರಚಿಸುತ್ತಾರೆ. ಕೃತಿಗಳನ್ನು ಬರೆಯುವುದಕ್ಕಿಂತ ಆ ಕೃತಿಗಳನ್ನು ಪ್ರಕಟಿಸುವುದು ಬಹಳ ಕಷ್ಟವಾಗುತ್ತಿತ್ತು. ಆದರೆ ಈಗೀಗ ಲೇಖಕರಿಗೆ ಪ್ರಕಾಶಕರ ಬೆಂಬಲ ಸಿಗುತ್ತಿರುವುದು ಸಂತಸ ತರುತ್ತಿದೆ.
ಮಕ್ಕಳ ಸಾಹಿತ್ಯ ಬರೆಯುವುದು ಬಹಳ ಕಷ್ಟ. ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಬರೆಯುವುದು ಸುಲಭದ ಕೆಲಸವಲ್ಲ.ಆದರೆ ನಾಗವೇಣಿ ಹೆಗಡೆ ತಮ್ಮ ಕಥಾ ಸಾಗರಿ ಕೃತಿಯಲ್ಲಿ ಮಕ್ಕಳಿಗೆ ಮನಮುಟ್ಟುವಂತೆ ಕಥೆಗಳನ್ನು ಬರೆದಿದ್ದಾರೆ.
ಮನೆಯಲ್ಲಿ ಉತ್ತಮ ಸಂಸ್ಕಾರವಿದ್ದರೆ ಆ ಮನೆಯ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುತ್ತಾರೆ. ಹೆಚ್ಚು ಓದುವುದರಿಂದ ಉತ್ತಮ ಸಂಸ್ಕಾರ ಬೆಳೆಯುತ್ತದೆ. ಆದ್ದರಿಂದ ಮಕ್ಕಳಿಗೆ ಚಿಕ್ಕಂದಿನಿಂದಲೆ ಓದುವ ಹವ್ಯಾಸವನ್ನು ಪಾಲಕರು ರೂಢಿಸಬೇಕು ಎಂದರು.
ಈ ಸಂದರ್ಭದಲ್ಲಿ ಹತ್ತಕ್ಕೂ ಹೆಚ್ಚು ಮಕ್ಕಳು ಕವನ ವಾಚನ ಮಾಡಿದರು.
ನಂತರ ನಾಗವೇಣಿ ಹೆಗಡೆ ಹೆಗ್ಗರ್ಸಿಮನೆ ಯವರ ಕವನ ಗಾಯನ ಸಿಂಚನ ಕಾರ್ಯಕ್ರಮ ನಡೆಯಿತು.
ಸೂರ್ಯಸಖ ಕುಲಕರ್ಣಿ ಸ್ವಾಗತಿಸಿದರು. ಭವ್ಯಾ ಹಳೇಯೂರ ನಿರೂಪಿಸಿದರು. ಶಿವಪ್ರಸಾದ ಹಿರೇಕೈ ವಂದಿಸಿದರು.

Share This
300x250 AD
300x250 AD
300x250 AD
Back to top