Slide
Slide
Slide
previous arrow
next arrow

ಚಂಪಾಷಷ್ಠಿ: ಮುಗ್ವಾದಲ್ಲಿ ನ.20ಕ್ಕೆ ಅಂಗಡಿಗಳ ಹರಾಜು

300x250 AD

ಹೊನ್ನಾವರ: ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ದೇವಾಲಯದಲ್ಲಿ ನ.29ರಂದು ಚಂಪಾಷಷ್ಠಿ ಉತ್ಸವದ ಪ್ರಯುಕ್ತ ನ.20ರಂದು ಅಂಗಡಿ ಮಂಗಟ್ಟುಗಳ ಹರಾಜು ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಸ್.ಆರ್.ಹೆಗಡೆ ಮಾಹಿತಿ ನೀಡಿದರು.
ಪುರಾಣ ಪ್ರಸಿದ್ಧ ಮುಗ್ವಾ ಗ್ರಾಮದ ಸುಬ್ರಹ್ಮಣ್ಯ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ವಿಜೃಂಭಣೆಯಿಂದ ನ.29ರಂದು ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8.30ರವರೆಗೆ ಪೂಜೆ ಸೇರಿದಂತೆ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಜಾನೆ 8.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಭಿಷೇಕ ಜರುಗಲಿದೆ. ಈ ದಿನ ಅಂಗಡಿಗಳನ್ನು ತೆರೆಯುವ ಕುರಿತಾಗಿ ನ. 20 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ದೇವಾಲಯದ ನಿಯಮಾನುಸಾರವಾಗಿ ಇದರಲ್ಲಿ ಆಸಕ್ತರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9480419572 ಈ ನಂಬರ್ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದ್ದಾರೆ.
ಈ ವೇಳೆ ಆಡಳಿತ ಮಂಡಳಿಯ ಸದಸ್ಯರಾದ ಎನ್.ಆರ್.ಹೆಗಡೆ ಮತ್ತು ಎನ್.ಎಲ್.ಹೆಗಡೆ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top