• Slide
    Slide
    Slide
    previous arrow
    next arrow
  • ನ.13 ಜೀವನ ಕೌಶಲ್ಯ, ಅಧ್ಯಯನ ಕೌಶಲ್ಯ,ಉದ್ಯೋಗಾವಕಾಶಗಳ ಮಾಹಿತಿ ಕಾರ್ಯಾಗಾರ

    300x250 AD

    ಶಿರಸಿ: ಇಲ್ಲಿನ ರಾಗಂ ಶೈಕ್ಷಣಿಕ ಮತ್ತು ಸಮಾಜ ಸೇವಾ ಸಂಸ್ಥೆಯ ವತಿಯಿಂದ ಗುಡ್ನಾಪುರದ ಶ್ರೀ ಬಂಗಾರೇಶ್ವರ ದೇವಸ್ಥಾನದ ಸಭಾಭವನದಲ್ಲಿ ನ.13, ಭಾನುವಾರದಂದು ಜೀವನ ಕೌಶಲ, ಅಧ್ಯಯನ ಕೌಶಲ ಹಾಗೂ ಉದ್ಯೋಗಾವಕಾಶಗಳ ಕುರಿತು ಒಂದು ದಿನದ ಉಚಿತ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

     ಈ ಕಾರ್ಯಾಗಾರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾಗಿರುವ ಎಂ.ಎಚ್. ನಾಯ್ಕ, ರಾಘವೇಂದ್ರ ಬೆಟ್ಟಕೊಪ್ಪ,  ಮನೋಜ್ ನಾಯ್ಕ, ರೀನಾ ಬಿ.ಟಿ, ಗಂಗಾಧರ ನಾಯ್ಕ ಪುರದಮಠ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಎಸ್ಎಸ್ಎಲ್ ಸಿ ಓದುತ್ತಿರುವ ಮತ್ತು ಅದಕ್ಕೂ ಮೇಲ್ಪಟ್ಟ ತರಗತಿಯ ವಿದ್ಯಾರ್ಥಿಗಳು ಹಾಗೂ ಉದ್ಯೋಗ ಆಕಾಂಕ್ಷಿಗಳು ಈ ಕಾರ್ಯಾಗಾರದ ಸದುಪಯೋಗವನ್ನು ಪಡಿಸಿಕೊಳ್ಳಬಹುದು.  ಆಸಕ್ತರು 9731038090 ಈ ವಾಟ್ಸಪ್ ಸಂಖ್ಯೆಗೆ ಹೆಸರನ್ನು ನೊಂದಾಯಿಸಬಹುದು ಎಂದು‌ ರಾಗಂ ಟ್ರಸ್ಟಿನ ಅಧ್ಯಕ್ಷ ರಾಘವೇಂದ್ರ ಟಿ. ನಾಯ್ಕ ಗುಡ್ನಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top