ಅಂಕೋಲಾ: ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕುಸುಮ ಪ್ರಕಾಶನ (ವಾಸರೆ) ಹಿರೇಗುತ್ತಿ ಇವರ ಆಶ್ರಯದಲ್ಲಿ ನಿವೃತ್ತ ಶಿಕ್ಷಕ ದಿನಕರ ನಾರಾಯಣ ನಾಯಕ ಇವರ ಪ್ರಥಮ ಕವನ ಸಂಕಲನ ‘ಕಡಲ ಹಕ್ಕಿ’ ಬಿಡುಗಡೆ ಸಮಾರಂಭ ನ.13ರಂದು 3 ಗಂಟೆಗೆ ಪಟ್ಟಣದ ಕಾಮತ್ ಪ್ಲಸ್ ಸಭಾಭವನದಲ್ಲಿ ನಡೆಯಲಿದೆ.
ನಿವೃತ್ತ ಪ್ರಾಧ್ಯಾಪಕ ಹಾಗೂ ಹಿರಿಯ ಸಾಹಿತಿ ಡಾ.ಶ್ರೀಪಾದ ಶೆಟ್ಟಿ ಕೃತಿ ಬಿಡುಗಡೆಗೊಳಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಧ್ಯಾಪಕ ಪ್ರೊ. ಆರ್.ಎಸ್.ನಾಯಕ ಕೃತಿ ಪರಿಚಯಿಸಲಿದ್ದು, ಜಿ.ಸಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಿದ್ಧಲಿಂಗಸ್ವಾಮಿ ವಸ್ತ್ರದ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಕುಮಟಾ ಕಸಾಪ ಅಧ್ಯಕ್ಷ ಸುಬ್ಬಯ್ಯ ನಾಯ್ಕ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಲೇಖಕ ದಿನಕರ ಎನ್.ನಾಯಕ ವಿನಂತಿಸಿದ್ದಾರೆ.
ನ. 13ಕ್ಕೆ ‘ಕಡಲ ಹಕ್ಕಿ’ ಕವನ ಸಂಕಲನ ಬಿಡುಗಡೆ
