ಶಿರಸಿ: ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಶಿರಸಿ ಹಾಗೂ ಅರುಣೋದಯ ಸಂಸ್ಥೆ (ರಿ) ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ 9-16 ವರ್ಷದ ಮಕ್ಕಳಿಗಾಗಿ “ಉಚಿತ ವಾರಾಂತ್ಯ ಕರಕುಶಲ ಕಲೆ ಮತ್ತು ಚಿತ್ರಕಲೆ ಕಲಿಕೆ” ಕಾರ್ಯಕ್ರಮವನ್ನು ಶಿರಸಿಯ ಅರುಣೋದಯ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದು, ನ.19 ರಂದು ಮಧ್ಯಾಹ್ನ 2.30ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು. ಕಾರ್ಯಕ್ರಮವು ಅಂದಿನಿಂದ ಜನವರಿ 2023 ಕೊನೆಯವರೆಗೆ ನೆಡೆಯಲಿದ್ದು ಪ್ರತಿ ಶನಿವಾರ ಮತ್ತು ಭಾನುವಾರ ಬೆಳ್ಳಿಗೆ 10.30ಕ್ಕೆ ಕರಕುಶಲ ಕಲೆ ಮತ್ತು ಚಿತ್ರಕಲೆ ಕಲಿಕೆಯನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಹೇಳಿಕೊಡಲಾಗಿವುದು. ಆಸಕ್ತರು 8660054140ಈ ನಂಬರ್‌ಗೆ ಸಂಪರ್ಕಿಸಬಹುದು. ಹೆಸರು ನೋಂದಾಯಿಸಲು ಕೊನೆಯ ದಿನಾಂಕ ನ. 17 ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಾರಾಂತ್ಯದಲ್ಲಿ ಉಚಿತ ಕರಕುಶಲ, ಚಿತ್ರಕಲೆ ಕಲಿಕೆ ತರಬೇತಿ
![](https://euttarakannada.in/wp-content/uploads/2021/08/euk-logo-640x438.jpg?v=1628352513)