Slide
Slide
Slide
previous arrow
next arrow

ಬಿಜೆಪಿ ಹಿರಿಯ ಮುಖಂಡ ಗಣಪತಿ ಬೊಳ್ಗುಡ್ಡೆಯವರಿಗೆ ಮಾತೃ ವಿಯೋಗ

300x250 AD

ಯಲ್ಲಾಪುರ: ಬಿಜೆಪಿ ಹಿರಿಯ ಮುಖಂಡ ಗಣಪತಿ ಬೊಳ್ಗುಡ್ಡೆಯವರ ತಾಯಿ ರಾಧಾ ವೆಂಕಟ್ರಮಣ ಭಟ್ಟ(ಬೋಳ್ಗುಡ್ಡೆ) ಬುಧವಾರ ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು.
ರಾಧಾ ಬೋಳ್ಗುಡ್ಡೆಯವರು ಪಾರಂಪರಿಕ ವೈದ್ಯರಾಗಿದ್ದ ಪತಿ ದಿ.ವೆಂಕಟ್ರಮಣ ಬೋಳ್ಗುಡ್ಡೆಯವರಿಗೆ ಔಷಧಿಯ ಸಸ್ಯಗಳನ್ನು ಬೆಳೆಸುವಲ್ಲಿ ಹಾಗೂ ಸಂಗ್ರಹಿಸುವುದರಲ್ಲಿ ಸಹಾಯ ಮಾಡುತಿದ್ದರಲ್ಲದೇ, ಔಷಧೀಯ ಸಸ್ಯಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದರು. ಇವರ ಹಿರಿಯ ಪುತ್ರ ದತ್ತಾತ್ರೇಯ ಬೋಳ್ಗುಡ್ಡೆ ಮಂಗಲಮೂರ್ತಿ ಕೋ ಆಪ್ ಸೊಸೈಟಿಯ ಅಧ್ಯಕ್ಷರಾಗಿದ್ದು, ಗಣಪತಿ ಬೊಳ್ಗುಡ್ಡೆ ಮರ್ಚಂಟ್ ಕೋ ಆಪ್ ಸೊಸೈಟಿಯ ನಿರ್ದೇಶಕರಾಗಿದ್ದಾರೆ. ದಿವಂಗತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ರಾಧಾ ಬೋಳ್ಗುಡ್ಡೆ ನಿಧನಕ್ಕೆ ಮರ್ಚಂಟ್ ಕೋ ಆಪ್ ಸೊಸೈಟಿ ಅಧ್ಯಕ್ಷ ಎಸ್ ಎನ್ ಭಟ್ಟ, ಪ್ರಧಾನ ವ್ಯವಸ್ಥಾಪಕ ನಾಗರಾಜ ಮದ್ಗುಣಿ, ಮಂಗಲಮೂರ್ತಿ ಕೋ ಆಪ್ ಸೊಸೈಟಿ ವ್ಯವಸ್ಥಾಪಕ ಎಂ ಆರ್ ಹೆಗಡೆ, ಬಿಜೆಪಿ ಹಿರಿಯ ಮುಖಂಡ ಉಮೇಶ ಭಾಗವತ ಮುಂತಾದವರು ಶೋಕ ವ್ಯಕ್ತ ಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top