Slide
Slide
Slide
previous arrow
next arrow

ಜಿಲ್ಲಾ ಮಟ್ಟದ ಅಣುಕು ಸಂಸತ್ತು ಸ್ಪರ್ಧೆ: ವಿವಿಧ ಪಿಯು ಕಾಲೇಜು ವಿದ್ಯಾರ್ಥಿಗಳು ಭಾಗಿ

300x250 AD

ಹೊನ್ನಾವರ: ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಅಣುಕು ಸಂಸತ್ತು ಸ್ಪರ್ಧೆಯು ಮೋಹನ್ ಶೆಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜು ಹೊನ್ನಾವರದಲ್ಲಿ ಇತ್ತೀಚೆಗೆ ನಡೆಯಿತು. ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪದವಿ ಪೂರ್ವ ಉಪ ನಿರ್ದೇಶಕರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಸಾಹಿತಿ ಶ್ರೀಪಾದ್ ಶೆಟ್ಟಿ, ಉಲ್ಲಾಸ್ ಹುದ್ದಾರ್, ಜಿಲ್ಲಾ ನೋಡಲ್ ಅಧಿಕಾರಿಗಳು,ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಶ್ರೀರಾಮ ಮೂರ್ತಿ ನಾಯಕ್ ಹಾಗೂ ಪದವಿ ಪೂರ್ವ ಕಾಲೇಜು ಹೊನ್ನಾವರದ ಪ್ರಾಚಾರ್ಯ ಮೋಹನ್ ಶೆಟ್ಟಿ, ರವಿ ಗೌಡ ಉಪಸ್ಥಿತರಿದ್ದರು. ಈ ಅಣಕು ಸಂಸತ್ತಿನಲ್ಲಿ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರು ಗಂಭೀರವಾದ ಚರ್ಚೆಯಲ್ಲಿ ಪಾಲ್ಗೊಂಡರು ಜನಪರ ಕೆಲಸಗಳು ಮತ್ತು ಸಾಧನೆಗಳ ಕುರಿತು ಪ್ರಧಾನಮಂತ್ರಿ ಮತ್ತು ಇತರ ಮಂತ್ರಿಗಳು ಸಮರ್ಥನೆಯನ್ನು ನೀಡಿದರೆ, ವಿರೋಧ ಪಕ್ಷದ ಮುಖಂಡರು ಮತ್ತು ಸದಸ್ಯರು ಗಂಭೀರವಾಗಿ ಅವರ ಕಾರ್ಯ ವೈಖರಿಯನ್ನು ಪ್ರಶ್ನಿಸಿದರು. ಸಭಾಪತಿಗಳು ಎರಡು ಪಕ್ಷಗಳ ಮಧ್ಯೆ ಸಮನ್ವಯವನ್ನು ತರುತ್ತ ಚರ್ಚೆಯನ್ನು ಉತ್ತಮವಾಗಿ ನಡೆಸಿಕೊಟ್ಟರು ಇದರಲ್ಲಿ ಪ್ರಥಮ ಸ್ಥಾನವನ್ನು ನಾಣಿಕಟ್ಟಾ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ, ದ್ವಿತಿಯ ಸ್ಥಾನವನ್ನು ಅಳ್ಳಂಕಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ,ತೃತಿಯ ಸ್ಥಾನವನ್ನು ಬನವಾಸಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪಡೆದರು.

300x250 AD
Share This
300x250 AD
300x250 AD
300x250 AD
Back to top