• Slide
    Slide
    Slide
    previous arrow
    next arrow
  • ಕಾರವಾರದ ಏಕೈಕ ಸಿಖ್ ಕುಟುಂಬದಿಂದ ಗುರುನಾನಕ್ ಜಯಂತಿ ಆಚರಣೆ

    300x250 AD

    ಕಾರವಾರ: ನಗರದ ಸರ್ದಾರ್ ಜಿ ಪೆಟ್ರೋಲ್ ಬಂಕ್ ಮಾಲಿಕರಾದ ಪ್ರಕಾಶ್ ಕೌರ್ ಅವರ ಮನೆಯಲ್ಲಿ ಗುರುನಾನಕ್ ಜಯಂತಿಯನ್ನ ಆಚರಿಸಲಾಯಿತು.
    ನಗರದಲ್ಲಿ ಕಳೆದ 40 ವರ್ಷಗಳಿಂದ ಪಂಜಾಬ್ ಮೂಲದ ಪ್ರಕಾಶ ಕೌರ್ ಅವರ ಕುಟುಂಬ ನೆಲೆಸಿದ್ದು, ಪ್ರತಿವರ್ಷ ಗುರುನಾನಕ್ ಜಯಂತಿ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಜಯಂತಿ ಹಿನ್ನಲೆಯಲ್ಲಿ ಮಂಗಳವಾರ ಮನೆಯಲ್ಲಿ ಗುರುಗ್ರಂಥ್ ಸಾಹೀಬ್ ಹೊತ್ತಿಗೆಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಇದಾದ ನಂತರ ತಮ್ಮ ಪೆಟ್ರೋಲ್ ಬಂಕ್‌ನಲ್ಲಿ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿದರು.
    ಸಿಖ್ ಮತದಲ್ಲಿ ಒಟ್ಟು ಹತ್ತು ಗುರುಗಳಿದ್ದು, ಗುರು ಗೋವಿಂದ್ ಸಿಂಗ್ ನಂತರ ಗ್ರಂಥ ಸಾಹೀಬ್ ಹೊತ್ತಿಗೆಯನ್ನ ಗುರು ಎಂದು ಸ್ವೀಕರಿಸಲಾಗಿದೆ. ಅದನ್ನು ಸಿಖ್ ಮತದವರು ಬಹಳ ಭಕ್ತಿ ಭಾವದಿಂದ ಪೂಜಿಸುತ್ತಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top