ಅಂಕೋಲಾ: ಗಂಡನ ಮನೆ ಬಿಟ್ಟು ತವರು ಮನೆಯಲ್ಲಿ ವಾಸಿಸುತ್ತಿದ್ದ ಗೃಹಿಣಿಯೋರ್ವಳು ಅನಾರೋಗ್ಯವನ್ನು ಮನಸ್ಸಿಗೆ ಹಚ್ಚಿಕೊಂಡು ಹಳ್ಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಂಬಾರಕೇರಿಯಲ್ಲಿ ನಡೆದಿದೆ.
ಸುನೀತಾ ನಾಯ್ಕ (50) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಈಕೆಯ ಗಂಡನ ಮನೆ ಹಾರವಾಡದಲ್ಲಿದ್ದು, ತನ್ನ ಅತ್ತೆ ತನ್ನೊಂದಿಗೆ ಸರಿಯಾಗಿ ಹೊಂದಿಕೊಳ್ಳುತ್ತಿಲ್ಲ ಎಂದು ಸುಮಾರು ವರ್ಷಗಳಿಂದ ಕುಂಬಾರಕೇರಿಯ ತವರು ಮನೆಯಲ್ಲಿಯೇ ತನ್ನ ಅಕ್ಕ- ತಂಗಿಯರೊಡನೆ ವಾಸಿಸುತ್ತಿದ್ದಳು. ಈ ನಡುವೆ ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದವಳು ಜಿಲ್ಲಾ ಆಸ್ಪತ್ರೆಯಿಂದ ಔಷಧೋಪಚಾರವನ್ನು ಪಡೆಯುತ್ತಿದ್ದಳು. ತನ್ನ ಅನಾರೋಗ್ಯ ವನ್ನು ಮನಸ್ಸಿಗೆ ಹಚ್ಚಿಕೊಂಡು ಇಂದು ಬೆಳಿಗ್ಗೆ ಕುಂಬಾರಕೇರಿಯಿಂದ ಸಮೀಪದಲ್ಲಿರುವ ಪೂಜಗೇರಿ ಹಳ್ಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳೆ ಎನ್ನಲಾಗಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂಜಗೇರಿ ಹಳ್ಳಕ್ಕೆ ಹಾರಿ ಮಹಿಳೆ ಆತ್ಮಹತ್ಯೆ
