Slide
Slide
Slide
previous arrow
next arrow

ಸಹಕಾರಿ ಸಂಘಗಳು ಸ್ವಾಯತ್ತ ಸಂಸ್ಥೆಗಳಾದರೆ ರೈತರ ಸರ್ವಾಂಗೀಣ ಏಳಿಗೆ ಸಾಧ್ಯ: ಸಚಿವ ಹೆಬ್ಬಾರ್

300x250 AD

ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಪಂ ವ್ಯಾಪ್ತಿಯ ಸೇವಾ ಸಹಕಾರಿ ಸಂಘದ ಶಾಖಾಕಟ್ಟದ ಮತ್ತು ಯರಮುಖದ ಸಭಾಭವನವನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಉದ್ಘಾಟಿಸಿದರು.

ನಂತರ ಯರಮುಖದ ಶ್ರೀ ಸೋಮೇಶ್ವರ ಸಭಾಭವನದಲ್ಲಿ ಮಾತನಾಡಿ, ಸಹಕಾರಿ ಸಂಘಗಳನ್ನು ಸಂಪೂರ್ಣ ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡುವ ಮೂಲಕ ರೈತರ ಸರ್ವಾಂಗೀಣ ಏಳಿಗೆಗೆ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಈ ಸಭಾಭವನ 50 ಲಕ್ಷ ರೂ.ನಲ್ಲಿ ನಿರ್ಮಿಸಲಾಗಿದ್ದು, ಜಿಲ್ಲೆಯಲ್ಲಿಯೇ ದೊಡ್ಡ ಸಭಾಭವನವಾಗಿದೆ. ಯಾವುದೇ ಅಭಿವೃದ್ಧಿ ಕೇವಲ ಒಬ್ಬರಿಂದ ಸಾಧ್ಯವಿಲ್ಲ ಕ್ರಿಯಾಶೀಲ ಕಾರ್ಯಪಡೆ ಇದ್ದಾಗ ಮಾತ್ರ ಇದು ಸಾಧ್ಯ. ಸಹಕಾರಿ ಕ್ಷೇತ್ರ ಎಲ್ಲಿ ಉತ್ತಮವಾಗಿದೆಯೇ ಅಲ್ಲಿ ರೈತರು ಜೀವಂತವಾಗಿದ್ದಾರೆ. ಎಲ್ಲಿ ಸಹಕಾರಿ ಕ್ಷೇತ್ರ ಜೀವಂತವಾಗಿಲ್ಲವೋ ಅಲ್ಲಿ ರೈತರೂ ಕೂಡ ಕಷ್ಟಕರ ಜೀವನ ನಡೆಸುತ್ತಿದ್ದಾರೆ. ಸರಕಾರದ ಅನುದಾನ ರೈತರಿಗೆ ಸಿಗಬೇಕಾದ ಸಹಕಾರಿ ಕ್ಷೇತ್ರ ಗಟ್ಟಿಯಾಗಬೇಕು. ನಮ್ಮ ರಾಜ್ಯದಲ್ಲಿ 9 ಜಿಲ್ಲೆಗಳಲ್ಲಿ ಮಾತ್ರ ಸಹಕಾರಿ ಕ್ಷೇತ್ರ ಉತ್ತಮವಾಗಿದ್ದು, ಉಳಿದೆಡೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಗಳು ನಿಷ್ಕ್ರಿಯವಾಗಿವೆ ಎಂದರು.
ಅಲ್ಲಿ ರೈತರಿಗೆ. ಸರಕಾರದ ಸಾಲ ಮನ್ನಾ, ಬಡ್ಡಿ ಮನ್ನಾ ದಂತ ಯಾವ ಯೋಜನೆಗಳೂ ಸಿಗುತ್ತಿಲ್ಲ. ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ 103 ವರ್ಷ ಪೂರೈಸಿದ್ದು ಇದುವರೆಗೂ ಹಾನಿಯನ್ನು ಅನುಭವಿಸಲಿಲ್ಲ. ಜಿಲ್ಲೆಯ ಜನರ 3 ಸಾವಿರ ಕೋಟಿ ಹಣ ಠೇವಣಿ ಇದ್ದು ಮಾದರಿ ಬ್ಯಾಂಕ್ ಆಗಿದೆ. ದೇಶದಲ್ಲಿ ಸಹಕಾರಿ ಚಳುವಳಿ ಜೀವಂತವಾಗಿದ್ದಾರೆ ಮಾತ್ರ ರೈತರು ಜೀವಂತವಾಗಿರುತ್ತಾರೆ. ರೈತರು, ಕಾರ್ಮಿಕರು, ಸೈನಿಕರು, ದೇಶದ ಬೆನ್ನೆಲುಬು ಎಂದು ಹಲವಾರು ಉದಾಹರಣೆ ನೀಡಿದರು.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ದೇಶದ ಅಭಿವೃದ್ಧಿ ಬಗ್ಗೆ ನಿಮ್ಮೆಲ್ಲರ ನಿಷ್ಠೆ ಮೆಚ್ಚುವಂತದ್ದು, ಸಹಕಾರಿ ರಂಗ ಶ್ರಮಿಕರ ಮೇಲೆ ನಿಂತಿದೆ. ಆ ದಿಶೆಯಲ್ಲಿ ನಮ್ಮ ಜಿಲ್ಲೆಯ ಮಧ್ಯವರ್ತಿ ಬ್ಯಾಂಕ್ ಕೂಡ ಉತ್ತಮ ಸಾಧನೆ ಮಾಡುತ್ತಿದೆ. ತಾಲೂಕು ಅರಣ್ಯಗಳಿಂದ ಕೂಡಿದ ಕಾರಣ ರೈತರ ಜೀವನ ಕಷ್ಟಕರವಾಗಿದೆ. ಅರಣ್ಯ ಇಲಾಖೆಯವರು ತಾವೇ ಇಲಾಖೆಯ ಮಾಲಿಕರಂತೆ ವರ್ತಿಸುತ್ತಿದ್ದಾರೆ. ಅವರು ಬೇಕಾದಂತೆ ಅರಣ್ಯದಲ್ಲಿ ವರ್ತಿಸಿದರೂ ಕಾನೂನು ಕ್ರಮ ಇಲ್ಲ ಆದರೆ ಬಡ ರೈತರಿಗೆ ಕಿರುಕುಳ ನೀಡುತ್ತಿರುವುದು ಸರಿ ಅಲ್ಲ. ರೈತರು ಉಳಿಸಿದ ಕಾಡಿನಲ್ಲಿ ಅವರಿಗೆ ತೊಂದರೆ ಆದರೆ ಮುಂದೆ ಕಷ್ಟಕರವಾಗಬಹುದು ಎಂದರು.
ವೇದಮೂರ್ತಿ ಪ್ರಸನ್ನ ಭಟ್ಟ, ನಂದಿಗದ್ದಾ ಗ್ರಾ.ಪಂ ಉಪಾಧ್ಯಕ್ಷ ಅರುಣ ದೇಸಾಯಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎನ್.ವಿ.ಹೆಗಡೆ ಸಹಕಾರಿ ಸಂಘದ ಮತ್ತು ಸಮಾಜ ಭವನದ ಕುರಿತು ಮಾತನಾಡಿ, ಈ ಸಂದರ್ಭದಲ್ಲಿ ಸಂಸದ ಅನಂತಕುಮಾರ ಹೆಗಡೆ ಇರಬೇಕಾಗಿತ್ತು ಎಂದು ಅವರ ಸಹಾಯ ಸಹಕಾರ ಸ್ಮರಿಸಿದರು. ವೇದಿಕೆಯಲ್ಲಿ ಗಣ್ಯರಿಗೆ ಸನ್ಮಾನ ನಡೆಯಿತು.
ಸ್ವರ್ಣವಲ್ಲಿ ಮಠದ ಗುಂದ ಸೀಮಾ ಅಧ್ಯಕ್ಷ ದತ್ತಾತ್ರೇಯ ಹೆಗಡೆ ನಂದಿಗದ್ದ ಗ್ರಾಪಂ ಅಧ್ಯಕ್ಷೆ ಸುಮನಾ ಹರಿಜನ ಉಪಸ್ಥಿತರಿದ್ದರು. ಆರ್. ಎನ್ ಹೆಗಡೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ಬೆಂಗಳೂರಿನ ಗಣಪತಿ ಭಟ್ಟ ಅಚ್ಚುಕಟ್ಟಾಗಿ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top