ಸಿದ್ದಾಪುರ: ತಾಲೂಕಿನ ಹಣಜೀಬೈಲಿನ ಯಕ್ಷಾಭಿಮಾನಿ ಬಳಗದಿಂದ ಊರನಾಗರಿಕರು ಹಾಗೂ ಮಿತ್ರವೃಂದದ ಸಹಕಾರದಲ್ಲಿ ಗದಾಯುದ್ಧ ಯಕ್ಷಗಾನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಣಜೀಬೈಲ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಹಿರಿಯ ಮದ್ದಲೆಗಾರ ಶ್ರೀಕಾಂತ ಹೆಗಡೆ ದಂಪತಿಯನ್ನು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಉ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಅಶೋಕ ಭಟ್ಟ ಹೊನ್ನೇಗುಂಡಿ ಅವರುಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕಲಾವಿದ ಪ್ರಭಾಕರ ಹೆಗಡೆ, ಗ್ರಾಮಲೆಕ್ಕಾಧಿಕಾರಿ ಹನುಮಂತಪ್ಪ, ಗಣ್ಯರಾದ ಆರ್.ಎಸ್.ಭಟ್ಟ, ನಾಗರಾಜ ನಾಯ್ಕ, ಶಾಂತಾರಾಮ ಮಡಿವಾಳ ಇತರರು ಪಾಲ್ಗೊಂಡಿದ್ದರು.
ಗದಾಯುದ್ಧ ಯಕ್ಷಗಾನ: ನಂತರ ನಡೆದ ಗದಾಯುದ್ಧ ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ, ಕೊಳಗಿ ಕೇಶವ ಹೆಗಡೆ, ಮದ್ದಲೆವಾದಕರಾಗಿ ಶಂಕರಭಾಗವತ ಯಲ್ಲಾಪುರ, ಚಂಡೆವಾದಕರಾಗಿ ಗಣೇಶ ಗಾಂವಕರ್ ಹಳುವಳ್ಳಿ ಪಾಲ್ಗೊಂಡಿದ್ದರು. ಅಶೋಕ ಭಟ್ಟ, ಪ್ರಭಾಕರ ಹೆಗಡೆ ಹಣಜೀಬೈಲ, ಶಂಕರ ಹೆಗಡೆ ನೀಲ್ಕೋಡು, ಸಂಜಯ ಬೆಳೆಯೂರು, ಮಹಾಬಲೇಶ್ವರ ಗೌಡ, ಅವಿನಾಶ ಕೊಪ್ಪ, ಪ್ರದೀಪ ಹೆಗಡೆ ಹಣಜೀಬೈಲ ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ಹಾಸ್ಯಪಾತ್ರಧಾರಿಯಾಗಿ ಶ್ರೀಧರ ಭಟ್ಟ ಕಾಸರಗೋಡು ಕಾಣಿಸಿಕೊಂಡರು.