ಕಾರವಾರ: ನಿರ್ಗಮಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರನ್ನ ಜಿಲ್ಲಾ ಕೇಂದ್ರದ ಪತ್ರಕರ್ತರು ಸನ್ಮಾನಿಸಿ ಬೀಳ್ಕೊಟ್ಟರು. ಈ ವೇಳೆ ಡಾ.ಪೆನ್ನೇಕರ್ ಪತ್ರಕರ್ತರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿ, ವರ್ಷಗಳ ಕಾಲ ಸಹಕಾರ ನೀಡಿದ ಪತ್ರಕರ್ತರಿಗೆ ಧನ್ಯವಾದ ತಿಳಿಸಿದರು. ಅಲ್ಲದೇ ಜಿಲ್ಲೆ, ಜಿಲ್ಲೆಯ ಜನರನ್ನ ಸದಾ ಸ್ಮರಿಸುವುದಾಗಿ ಹೇಳಿದರು.