ಕಾರವಾರ: ಪಾರ್ಶ್ವ ಚಂದ್ರ ಗ್ರಹಣವು ನ.08ರಂದು ಭಾರತದ ಬಹುತೇಕ ಭಾಗಗಳಲ್ಲಿ ಗೋಚರಿಸಲಿದೆ. ಕಾರವಾರದಲ್ಲಿ ಸಂಜೆ 6.03ರಿಂದ 6.19ರವರೆಗೆ ಪಾರ್ಶ್ವಚಂದ್ರ ಗ್ರಹಣವನ್ನು ವೀಕ್ಷಿಸಲಾಗುತ್ತಿದೆ.
ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಪಾರ್ಶ್ವ ಚಂದ್ರ ಗ್ರಹಣ ವೀಕ್ಷಣೆಗೆ ಕೋಡಿಬಾಗ ಕಾಳಿನದಿ ಉದ್ಯಾನದಲ್ಲಿ (ಗಣಪತಿ ವಿಸರ್ಜನಾ ಸ್ಥಳ) ಟೆಲಿಸ್ಕೋಪ್ ಮುಖಾಂತರ ವ್ಯವಸ್ಥೆ ಮಾಡಲಾಗಿದೆ. ನಂತರ ಗುರು ಹಾಗೂ ಶನಿ ಗ್ರಹಗಳ ವೀಕ್ಷಣೆಯನ್ನು ಮಾಡಿಸಲಾಗುತ್ತಿದೆ.
ಆಸಕ್ತರು ಪಾರ್ಶ್ವ ಚಂದ್ರ ಗ್ರಹಣವನ್ನು ವೀಕ್ಷಿಸಲು ಸಂಜೆ 6 ಗಂಟೆಗೆ ಬರಬೇಕೆಂದು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.