• Slide
    Slide
    Slide
    previous arrow
    next arrow
  • ಸತೀಶ್ ಜಾರಕಿಹೊಳಿ ಒಬ್ಬ ನಾಸ್ತಿಕ: ಪ್ರಮೋದ್‌ ಮುತಾಲಿಕ್

    300x250 AD

    ಶಿರಸಿ: ಸತೀಶ್ ಜಾರಕಿಹೊಳಿ ಒಬ್ಬ ನಾಸ್ತಿಕ, ಹಿಂದೂ ವಿರೋಧಿ. ಸ್ಮಶಾನದಲ್ಲಿ ಪೂಜೆ, ಮದುವೆ, ಊಟ ಮಾಡುವ ನಾಸ್ತಿಕತೆ ಇರುವವರಿಗೆ ಹಿಂದೂ ಶಬ್ದದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಅವರ ಹೇಳಿಕೆಯನ್ನು ವಾಪಾಸ್ ಪಡೆಯಬೇಕು. ಹಿಂದೂ ಜನರ ಕ್ಷಮೆ ಕೇಳಬೇಕು ಎಂದು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

    ಸತೀಶ್ ಜಾರಕಿಹೊಳಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಕಾಂಗ್ರೆಸ್‌ನವರಿಗೆ ಇನ್ನೂ ಕೂಡ ಬುದ್ಧಿ ಬಂದಿಲ್ಲ. ಹಿಂದುತ್ವ, ಹಿಂದುಗಳನ್ನು, ಹಿಂದು ಧರ್ಮ, ಹಿಂದು ಸಂಘಟನೆಗಳನ್ನು ಅವಹೇಳನ ಮಾಡುವುದು ಸರಿಯಲ್ಲ. ಕುವೆಂಪುರವರು ಹಿಂದು, ಜೈನ, ಸಿಖ್, ಕ್ರಿಶ್ಚಿಯನ್ ಎಂಬ ಶಬ್ದವನ್ನ ನಾಡಗೀತೆಯಲ್ಲಿ ಬಳಸಿದ್ದಾರೆ. ಆಜಾದ್ ಹಿಂದ್ ಪೌಜ್ ಎಂದು ಸುಭಾಷ್ ಚಂದ್ರಬೋಸ್‌ರವರು ಬಳಸಿದ್ದಾರೆ. ಅನೇಕ ಸಂದರ್ಭದಲ್ಲಿ ಭಗತ್ ಸಿಂಗ್, ಸಾವರ್ಕರ್ ಕೂಡ ಈ ಶಬ್ದವನ್ನು ಬಳಸಿದ್ದಾರೆ. ಸುಪ್ರೀಂ ಕೋರ್ಟ್ ಕೂಡ 25 ವರ್ಷದ ಹಿಂದೆ ಹಿಂದೂ ಧರ್ಮ ಅತ್ಯಂತ ಒಳ್ಳೆಯ ಜೀವನದ ಪದ್ಧತಿ ಎಂದು ಹೇಳಿಕೆ ಕೊಟ್ಟಿದೆ ಎಂದಿದ್ದಾರೆ.

    300x250 AD

    ಹಿಂದೂ ಶಬ್ದ ಜಾತಿ ಸೂಚಕವಲ್ಲ, ಮತ ಸೂಚಕವಲ್ಲ, ಇದು ಯಾವುದೇ ರೀತಿ ಸಂಬಂಧವಿಲ್ಲದ ಜೀವನದ ಪದ್ಧತಿ ಇರುವ ಈ ಶಬ್ದಕ್ಕೆ ಅಪಮಾನ ಮಾಡುತ್ತಿರುವುದು ಸರಿಯಲ್ಲ. ಇದನ್ನು ಖಂಡಿಸುತ್ತೇನೆ ಎಂದರು.

    Share This
    300x250 AD
    300x250 AD
    300x250 AD
    Leaderboard Ad
    Back to top