• first
  second
  third
  Slide
  Slide
  previous arrow
  next arrow
 • ಕನ್ನಡ ಭಾಷೆ ಬೆಳವಣಿಗೆಗೆ ಕಾರ್ಯಕ್ರಮಗಳು ನಡೆಯಬೇಕು: ನಾಗೇಶ ಶೆಟ್ಟಿ

  300x250 AD

  ಹೊನ್ನಾವರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕನ್ನಡ ಕಾರ್ತಿಕ ಉಪನ್ಯಾಸ ಕಾರ್ಯಕ್ರಮ ಜರುಗಿತು.
  ಕಾಲೇಜು ಪ್ರಾಂಶುಪಾಲ ನಾಗೇಶ ಶೆಟ್ಟಿ, ಕನ್ನಡ ಭಾಷೆ ಬೆಳವಣಿಗೆಗೆ ಕಾರ್ಯಕ್ರಮಗಳು ನಡೆಯಬೇಕು. ಸಾಹಿತ್ಯ ಪರಿಷತ್ತು ಹಾಗೂ ನಾವು ಹೆಚ್ಚಿನ ಸಾಹಿತ್ತ್ಯಿಕ ಚಟುವಟಿಕೆ ಮಾಡಲು ಸದಾ ಅವಕಾಶವಿದೆ ಎಂದರು.
  ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ ಸಂದೀಪ್ ಭಟ್ಟ ಮಾತನಾಡಿ, ಜಾನಪದ ಸಾಹಿತ್ಯ ಜೀವನದಲ್ಲಿ ಶ್ರೇಷ್ಠತೆ ಸಾಧಿಸಲು ಅಮೂಲ್ಯ ಕೊಡುಗೆ ನೀಡಿದೆ. ಹಿಂದಿನ ಹಾಡುಗಳು, ನುಡಿಮುತ್ತುಗಳು, ಒಗಟುಗಳು ಅರ್ಥಪೂರ್ಣವಾಗಿದ್ದು, ನಿಜ ಬದುಕಿಗೆ ದಾರಿ ತೋರಿಸುತ್ತದೆ ಎಂದರು.
  ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕ ಡಾ.ಎಸ್.ಡಿ.ಹೆಗಡೆ, ಇಂದು ನಡೆಯುವ ಕ್ರೌರ್ಯಗಳು ಸಹಿಸಲಾರದ ಹಂತದಲ್ಲಿದೆ ಜನಪದ ಸಾಹಿತ್ಯದಲ್ಲಿ ಮಾನವೀಯ ವಿಚಾರಗಳನ್ನು ಅರಿತು ಜೀವನಪರವಾಗಿರಬೇಕು. ಜನಪದ ಎಲ್ಲಾ ಸಾಹಿತ್ಯದ ತಾಯಿ ಬೇರು ಎಂದರು.
  ಕಸಾಪ ಅಧ್ಯಕ್ಷ ಎಸ್.ಎಚ್.ಗೌಡ ಪ್ರಾಸ್ತಾವಿಕವಾಗಿ ಕನ್ನಡ ಕಾರ್ತಿಕ ಕಾರ್ಯಕ್ರಮದ ಪರಿಚಯ ಮಾಡಿದರು. ವೇದಿಕೆಯಲ್ಲಿ ಕಸಾಪ ಕೋಶಾಧ್ಯಕ್ಷ ನಾರಾಯಣ ಹೆಗಡೆ, ಸದಸ್ಯರಾದ ಡಾ.ಇಸ್ಮಾಯಿಲ್ ತಲಕಣಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಜೀನತ್ ಕಣವಿ, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

  300x250 AD
  Share This
  300x250 AD
  300x250 AD
  300x250 AD
  Back to top