ಕುಮಟಾ: ಹಿಂದಿನ ಕಾಲದಲ್ಲಿ ವಿದ್ಯುತ್ ಸಂಪರ್ಕವೆ ಇಲ್ಲದ ಸಂದರ್ಭದಲ್ಲಿ ರಾತ್ರಿ ವೇಳೆಯಲ್ಲಿ ಎಲ್ಲಾದರು ಹೋಗಬೇಕಾದಲ್ಲಿ ಸೂಡಿ (ದೀಪ) ಹಿಡಿದೆ ಹೋಗುತ್ತಿದ್ದರು. ಆದರೆ ಅದೇ ಪರಿಸ್ಥಿತಿ ಬರ್ಗಿ ಗ್ರಾಮದ ರಾಷ್ಟೀಯ ಹೆದ್ದಾರಿ 66ರಲ್ಲಿ ಉಂಟಾಗಿದೆ.
ಹೆದ್ದಾರಿ ಕಾಮಗಾರಿಯನ್ನ ಗುತ್ತಿಗೆ ಪಡೆದ ಐಆರ್‌ಬಿ ಕಂಪನಿ ಮೊದಲು ಕಾಮಗಾರಿಯನ್ನ ಆರಂಭಿಸಿತ್ತು. ಆ ವೇಳೆ ಯಾರೂ ಸಹ ಯಾವುದೆ ವಿರೋಧ ಮಾಡದೆ ಅಭಿವೃದ್ಧಿ ದೃಷ್ಟಿಯಿಂದ ಜಾಗವನ್ನು ಖುಲ್ಲಾ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇನ್ನೂ ಕೂಡ ಈ ಗ್ರಾಮದಲ್ಲಿ ಸರಿಯಾಗಿ ಐಆರ್‌ಬಿ ಹೆದ್ದಾರಿಯಲ್ಲಿ ಅಳವಡಿಸಿದ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಉದಾರಣೆಗಳಿಲ್ಲ. ಸಮಸ್ಯೆ ಆದಾಗಲೆಲ್ಲಾ ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳೀಯರು ಹೇಳಿದ್ದರು. ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿ ಹೋದರು ದುರಸ್ತಿ ಕಂಡಿಲ್ಲ. ಇಂತಹ ದುಃಸ್ಥಿತಿಯನ್ನ ನೋಡಿದ್ದರೆ. ಇಲ್ಲಿನ ಅಧಿಕಾರಿಗಳ, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವೆ ಎದ್ದು ಕಾಣುವಂತಾಗಿದೆ.
ಕಾರವಾರದಿಂದ ಭಟ್ಕಳದವರಗೆ ದೀಪಗಳು ಉರಿಯುತ್ತಿವೆ. ಆದರೆ ಬರ್ಗಿಯಲ್ಲಿ ಮಾತ್ರ ಯಾಕೆ ಹೀಗೆ ಎಂದು ಜನರು ಪ್ರಶ್ನೆ ಮಾಡುವಂತಾಗಿದೆ. ಹೀಗಾಗಿ ಕಿವಿ ಕೇಳದ ಅಧಿಕಾರಿಗಳಿಗೆ ಎಷ್ಟೆ ಬಾರೀ ಹೇಳಿದ್ದರೂ ಕೇಳಿಸದೆ ಇರುವ ಕಾರಣಕ್ಕೆ ಬರ್ಗಿ ಗ್ರಾಮದ ಜನರು ಮುಂದಾಗಿ ಹೆದ್ದಾರಿಯಲ್ಲಿ ಓಡಾಡುವ ಜನರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೆದ್ದಾರಿಯಲ್ಲಿ ಉರಿಯದೆ ಇರುವ ವಿದ್ಯುತ್ ಕಂಬಗಳಿಗೆ ಸೂಡಿ ಕಟ್ಟಿ ದೀಪ ಹಚ್ಚುವ ಮೂಲಕ ಹೆದ್ದಾರಿಯಲ್ಲಿ ಕತ್ತಲು ನಿವಾರಿಸುವ ಕಾರ್ಯಕ್ಕೆ ಜನರು ಮುಂದಾಗುವಂತಾಗಿದೆ.
ಸಂಬಂಧಿತ ಅಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಗಳು ಸೂಡಿ (ದೀಪ) ಹಚ್ಚು ಮೊದಲು ಕೆಟ್ಟು ಹೋದ ದೀಪಗಳನ್ನು ದುರಸ್ಥಿ ಮಾಡುವ ಮೂಲಕ ಮಾನ ಉಳಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.