• Slide
    Slide
    Slide
    previous arrow
    next arrow
  • ಟೆಂಡರಿನ ಅಂದಾಜು ಪತ್ರಿಕೆಯಲ್ಲಿ ಲೋಪದೋಷ; ಗುತ್ತಿಗೆದಾರರ ಸಂಘದಿಂದ ಆರೋಪ

    300x250 AD

    ದಾಂಡೇಲಿ: ನಗರಸಭೆಯಿಂದ ಅ.21ರಂದು ಕರೆದಿರುವ ಟೆಂಡರಿನ ಅಂದಾಜು ಪತ್ರಿಕೆಯಲ್ಲಿ ಲೋಪದೋಷವಿದ್ದು, ಇದರಿಂದ ಗುತ್ತಿಗೆದಾರರಿಗೆ ಭಾರಿ ಪ್ರಮಾಣದ ನಷ್ಟವಾಗಲಿದೆ. ಈ ನಿಟ್ಟಿನಲ್ಲಿ ಕೂಡಲೆ ಈ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘವು ಆಗ್ರಹಿಸಿದೆ.
    ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್.ಶಶಿಧರನ್, ಉಪಾಧ್ಯಕ್ಷ ಎಸ್.ಜಿ.ರಜಪೂತ್, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಲಮಾಣಿ, ಸಂಘಟನಾ ಕಾರ್ಯದರ್ಶಿ ಆರ್.ಸಿ.ದೇವಾನಂದ ಅವರು ನಗರಸಭೆಯ ಈ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು. ಅ.21ರಂದು ಕರೆದಿರುವ ಟೆಂಡರ್ ಅಂದಾಜು ಪತ್ರಿಕೆಯಲ್ಲಿ 2022- 23ನೇ ಸಾಲಿನ ಸೆ.01ರಂದು ಜಾರಿಗೆ ಬಂದಿರುವ ಎಸ್.ಆರ್ ದರದಲ್ಲಿ ತಿದ್ದುಪಡಿ ಮಾಡಲಾದ 3ನೇ ಪರಿಷ್ಕರಣೆಯ ನಿಯಮಗಳನ್ನು ಅಳವಡಿಸದೇ ಅನ್ಯಾಯ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
    ಈಗ ಜಾರಿಯಲ್ಲಿರುವ ಎಸ್.ಆರ್ ದರದ 3ನೇ ಪರಿಷ್ಕರಣೆಯಲ್ಲಿ ಸಿಮೆಂಟ್ ಕಾಂಕ್ರೀಟ್ ಗಟಾರಿನ ಐಟಂನ ದರದಲ್ಲಿ ಸೆಂಟ್ರಿಂಗ್ ಐಟಂಗೆ 3ನೇ ಪರಿಷ್ಕರಣೆಯ ದರದಲ್ಲಿ ಶೇ 35 ಇರುತ್ತದೆ. ಆದರೆ ದಾಂಡೇಲಿ ನಗರ ಸಭೆಯವರು ಕರೆದಿರುವ ಟೆಂಡರಿನ ಅಂದಾಜು ಪತ್ರಿಕೆಯಲ್ಲಿ ಸೆಂಟ್ರಿಂಗ್ ದರವನ್ನು ಶೇ 5 ಸೇರಿಸಿ ಅಂದಾಜು ಪತ್ರಿಕೆ ತಯಾರಿಸಿ ಟೆಂಡರ್ ಕರೆದಿದ್ದಾರೆ. ಏರಿಯಾ ವೇಟೇಜ್ 3ನೇ ಪರಿಷ್ಕರಣೆ ಪ್ರಕಾರ ಸರಕಾರದ ಇತರೆ ಇಲಾಖೆಗಳಲ್ಲಿ ಶೇ 12 ಅಳವಡಿಸಿಕೊಂಡಿರುತ್ತಾರೆ. ಆದರೆ ನಗರಸಭೆಯವರು ಶೇ 12ರ ಬದಲಾಗಿ ಶೇ 3 ತೆಗೆದುಕೊಂಡು ಅಂದಾಜು ಪತ್ರಿಕೆ ತಯಾರು ಮಾದ್ದಾರೆ. ಈಗಾಗಲೇ ನಗರಸಭೆಯಡಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಭಾರಿ ಪ್ರಮಾಣದ ನಷ್ಟವಾಗಿರುತ್ತದೆ. ಈ ಲೋಪವನ್ನು ಕೂಡಲೆ ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಗರ ಸಭೆಯ ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಗಳಿಗೆ ಬಹಿಷ್ಕಾರ ಹಾಕಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
    ಈ ಸಂದರ್ಭದಲ್ಲಿ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಖಜಾಂಚಿ ಸುಧಾಕರ ರೆಡ್ಡಿ, ಸಹ ಕರ‍್ಯದರ್ಶಿಗಳಾದ ಎಸ್.ಎನ್.ಪಡುಕೋಣೆ, ಟಿ.ಆನಂದ ಮಾಧವನ್ ಹಾಗೂ ಸಂಘದ ಪ್ರಮುಖರುಗಳಾದ ಎಸ್.ಬಿ.ಮುರಡಿ, ಎ.ಗೌಸ್‌ಪೀರ್, ಆರ್.ಡಿ.ಜನ್ನು, ಸುಬ್ರಹ್ಮಣಿ, ಸಿ.ವಿ.ಕೋಕಣಿ, ಎಸ್.ಅನುರುದ್ದನ್, ರಾಘು ಕಲಾಲ್, ಅವಿನಾಶ ಗೋಡ್ಕೆ, ಮಹೇಶ ಗುತ್ತನ್ನವರ, ಪ್ರದೀಪ ಗವಸ, ಎಸ್.ಎನ್.ದುಸಗಿ, ನಾಗರಾಜ ಗುಲಗಂಜಿ ಮೊದಲಾದವರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top