ಮುಂಡಗೋಡ: ರವಿಗೌಡ ಪಾಟೀಲರು ಟಿಎಪಿಎಮ್‌ಸಿ ಸೊಸೈಟಿಗೆ ಸರಕಾರದ ಪ್ರತಿನಿಧಿಯಾಗಲು ಬರುವುದಿಲ್ಲ ಹಾಗೂ ಅಧ್ಯಕ್ಷರಾಗಲು ಬರುವುದಿಲ್ಲ ಹೈಕೋರ್ಟ್ ಆದೇಶಿಸಿದೆ ಎಂದು ಟಿಎಪಿಎಸ್‌ಸಿ ಸೊಸೈಟಿ ಕಾಂಗ್ರೆಸ್ ಸದಸ್ಯ ತಿರುಪತಿ ಭೋವಿವಡ್ಡರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ರ ನ.3ಕ್ಕೆ ಸರಕಾರದ ಪ್ರತಿನಿಧಿಯಾಗಿ ರವಿಗೌಡ ಪಾಟೀಲರು ಆಯ್ಕೆಯಾಗಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಬೆಂಬಲಿತ ಸೊಸೈಟಿ ಸದಸ್ಯರಾದ ಆಲೇ ಹಸನ ಬೆಂಡಿಗೇರಿ ಹಾಗೂ ಮಂಜುನಾಥ ಪಾಟೀಲರೊಮದಿಗೆ ಸೇರಿಕೊಂಡು ನಾವು ಮೂವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೆವು. ಆ ಪ್ರಕಾರವಾಗಿ ಹೈಕೋರ್ಟ್ನಿಂದ ಅ.19ರಂದು ಆದೇಶ ಪ್ರತಿ ಬಂದಿದ್ದು, ಸಹಕಾರಿ ಕಾಯ್ದೆ ಪ್ರಕಾರ ರವಿಗೌಡ ಪಾಟೀಲರಿಗೆ ಸೊಸೈಟಿಯಲ್ಲಿ ಪ್ರತಿನಿಧಿಯಾಗಿಯಾಗಲಿ, ಅಧ್ಯಕ್ಷರಾಗಿ ಆಗಲಿ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದೆ ಎಂದಿದ್ದಾರೆ.
ರವಿಗೌಡ ಪಾಟೀಲರು ಸರಕಾರದ ಪ್ರತಿನಿಧಿಯಾಗಿ ಟಿಎಪಿಎಮ್‌ಸಿ ಸೊಸೈಟಿಗೆ ನಿರ್ದೇಶಕರಾಗಲು ಬರುವುದಿಲ್ಲ ಎಂದು ಚುನಾವಣಾಧಿಕಾರಿಗಳಿಗೆ ತಿಳಿಸಿದ್ದರು ಸಹಿತ ಅವರು ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ರವಿಗೌಡ ಪಾಟೀಲರ ಆಯ್ಕೆಯನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದೆವು. ಹಿಂದಿನ ಆಡಳಿತ ಕಮಿಟಿ ಮಾರ್ಕೇಟಿಂಗ್ ಸೊಸೈಟಿ ಆಡಳಿತ ಮಾಡಿದ್ದಾಗ ಆಗ ಸೊಸೈಟಿಗೆ 7,31,670 ರೂ. ಲಾಭವಾಗಿತ್ತು. ಆಮೇಲೆ ರವಿಗೌಡ ಪಾಟೀಲ ಅಧ್ಯಕ್ಷರಾಗಿ ಬಂದಾಗ ಸೊಸೈಟಿಯಲ್ಲಿ 8,79,3611 ರೂ. ಹಾನಿಯಾಗಿತ್ತು. ಸಹಕಾರಿ ಕಾಯ್ದೆ ಪ್ರಕಾರ ಯಾವುದೇ ಅಭಿವೃದ್ಧಿ ಕೆಲಸಕಾರ್ಯಗಳನ್ನು ಮಾಡುವಾಗ ಮಾರ್ಕೇಟಿಂಗ್ ಸೊಸೈಟಿಯ ಸದಸ್ಯರ ಗಮನಕ್ಕೆ ತರಬೇಕು. ಅದನ್ನು ಮಾಡದೇ, ಮಾಡಿರುವ ಕೆಲಸಗಳ ಬಗ್ಗೆ ಯಾವುದೇ ಸದಸ್ಯರಿಗೂ ತಿಳಿಸದೇ, ಠರಾವು ಬರೆಸದೇ, ಡಿಆರ್‌ರವರ ಪರವಾನಿಗೆ ತೆಗೆದುಕೊಳ್ಳದೆ, ಟಿ.ವಿ. ಸೆಕ್ಷನ್, ಕೃಷಿ ಉಪಕರಣ ಹಾಗೂ ಬಟ್ಟೆ ವಿಭಾಗಕ್ಕೆ ಸುಮಾರು 22 ಲಕ್ಷ ಖರ್ಚು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇಲಾಖೆ ಪರಿಮಿಶನ್ ಇಲ್ಲದೆ ಹೀಗೆ ಮಾಡಿದ್ದಾರೆ. ಇದಕ್ಕೆ ನಾವು ವಿರೋಧವಾಗಿ ಠರಾವು ಬರೆಸಿದೆವು. ನಿರ್ದೇಶಕರ ಗಮನಕ್ಕೆ ತರದೇ ಇರುವುದರಿಂದ ಹಣ ದೂರಪಯೋಗ ಆಗಿದೆ ಎಂದು ಡಿಆರ್‌ಗೆ ದೂರು ನೀಡಿದ್ದೆವು. ಆದರೆ ನಮಗೆ ಉತ್ತರ ಸಿಗಲಿಲ್ಲ. ಇದಾದ ನಂತ 2 ಟ್ರಕ್ ತುಂಬ ಮೋಡಕಾ ಕಬ್ಬಿಣ ಮಾರಾಟ ಮಾಡಿದರು. ಎರಡು ದೊಡ್ಡ ಸಿಮೆಂಟ್ ಡ್ರಮ್ ಮಾರಾಟ ಮಾಡಿದರು. ಅದನ್ನು ನಮಗೆ ತಿಳಿಸಿಲ್ಲಾ. ಬಂದಂತಹ ಹಣವನ್ನು ಸೊಸೈಟಿಗೆ ತುಂಬಲಿಲ್ಲ. ಲಾಭಾಂಶ ತರುವಂತಹ ಗಿಡಗಳನ್ನು ನೆಲಸಮ ಮಾಡಿ ಆ ಜಾಗವನ್ನು ಯಾರಿಗೆ ನೀಡಿದ್ದಾರೆ ಎಂಬುದು ತಿಳಿಸಿಲ್ಲ. ಲಾಭಾಂಶ ತರುತ್ತಿದ್ದ ಒಂದು ಲಾರಿಯನ್ನು ಕೆಟ್ಟಿದೆ ಎಂದು ನಿಲ್ಲಿಸಿ ಸೊಸೈಟಿಗೆ ಹಾನಿ ಮಾಡಿದ್ದಾರೆ. ಈ ಎಲ್ಲ ಹಾನಿಗಳಿಗೆ ಜವಾಬ್ದಾರರು ರವಿಗೌಡ ಪಾಟೀಲರೇ ಆಗಿದ್ದಾರೆ. ಅವರೇ ಹಾನಿಯನ್ನು ಭರಣ ಮಾಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾರ್ಕೇಟಿಂಗ್ ಸೊಸೈಟಿ ನಿರ್ದೇಶಕ ಆಲೇ ಹಸನ ಬೆಂಡಿಗೇರಿ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಮಹ್ಮದಗೌಸ ಮಕಾನದಾರ ಇದ್ದರು.