• Slide
  Slide
  Slide
  previous arrow
  next arrow
 • ಸ್ಥಳಿಯರ ಬೆಂಬಲ ಇದ್ದಾಗಲೇ ಕೆಲಸ ಕಾರ್ಯಗಳು ಸರಳವಾಗಿ ನಡೆಯಲು ಸಾಧ್ಯ:ನಾಗರಾಜ ಕಟ್ಟಿಮನಿ

  300x250 AD

  ಮುಂಡಗೋಡ: ನಾನು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ನಾನು ಸ್ವಂತ ದುಡಿದ ಹಣ, ಸಾಲಸೋಲಮಾಡಿ, ಬ್ಯಾಂಕ್‌ಗಳಲ್ಲಿ ಒ.ಡಿ. ಮಾಡಿ ಸಿದ್ದ ಉಡುಪುಗಳ ಫ್ಯಾಕ್ಟರಿ ಹಾಕಿದ್ದೇನೆ. ಇದಕ್ಕೆ ಸ್ಥಳಿಯರ ಬೆಂಬಲ ಇದ್ದಾಗಲೇ ಕೆಲಸ ಕಾರ್ಯಗಳು ಸರಳವಾಗಿ ನಡೆಯಲು ಸಾಧ್ಯ ಎಂದು ಬಸ್‌ಸ್ಟಾಂಡ್ ಮೇಲ್ಗಡೆಯ ಕಟ್ಟಡವನ್ನು ಭಾಡಿಗೆ ಪಡೆದು ಶ್ರೀಲಕ್ಷ್ಮಿ ವೇಂಕಟೇಶ್ವರ ಅಪರೆಲೆಸ್ ಸಿದ್ದ ಉಡುಪುಗಳ ಫ್ಯಾಕ್ಟರಿ ಮಾಲಿಕ ನಾಗರಾಜ ಕಟ್ಟಿಮನಿ ಹೇಳಿದರು
  ಅವರು ಶುಕ್ರವಾರ ಸಿದ್ದ ಉಡುಪುಗಳ ಘಟಕದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
  ಶ್ರೀಲಕ್ಷ್ಮಿ ವೇಂಕಟೇಶ್ವರ ಅಪರೆಲೆಸ್ ಸಿದ್ದ ಉಡುಪುಗಳ ಫ್ಯಾಕ್ಟರಿಗೆ ಪಾರ್ಟನರ್ ಇದ್ದಾರೆ ಇಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಕಿರುಕುಳ ನೀಡುತ್ತಾರೆ, ಸಂಬಳ ಸರಿಯಾಗಿ ನೀಡುವುದಿಲ್ಲ, ಸರಕಾರದ ಸಬ್ಸಿಡಿ ಪಡೆದು ಹಾಗೂ ಜನಪ್ರತಿನಿಧಿಗಳಿಂದ ಹಣ ಪಡೆದು ಈ ಘಟಕವನ್ನು ನಡೆಸುತ್ತಿದ್ದಾರೆ ಎನ್ನುವುದು ಶುದ್ಧ ಸುಳ್ಳು. ಈ ಘಟಕಕ್ಕೆ ನಾನೊಬ್ಬನೆ ಮಾಲಿಕ. ನಾನು ಕಿರುಕುಳ ನೀಡುತ್ತಿದ್ದೇನೆ ಇಲ್ಲವೆ ಎನ್ನುವುದು ನೀವೇ ಹೋಗಿ ಕಾರ್ಮಿಕರಿಗೆ ವಿಚಾರಿಸಬಹುದು. ಸಂಬಳ ನೀಡಲು 4-5 ದಿನ ತಡವಾಗಬಹುದು ಆದರೆ ಕಾರ್ಮಿಕರ ಸಂಬಳ ನೀಡುವುದಿಲ್ಲ ಎನ್ನುವುದು ಹಸಿ ಸುಳ್ಳು ಎಂದರು.
  ಫ್ಯಾಕ್ಟರಿ ತೆರೆದಾಗಿನಿಂದ ನನಗೆ 10 ಲಕ್ಷ ರೂ ನಷ್ಟವಾಗಿದೆ. ಈಗ ಲಾಭಾಂಶ ಮಾಡುವ ಕಾಲದಲ್ಲಿ ನನ್ನ ಫ್ಯಾಕ್ಟರಿ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅವರು ಯಾರು ಎನ್ನುವುದು ಗೊತ್ತಿದೆ. ಬಸ್‌ಗಳ ಸಮಸ್ಯದಿಂದ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ನಾನು ಮೂಲತಃ ಗುತ್ತಿಗೆದಾರ ಆ ಸಮಯದಲ್ಲಿ ಸಚಿವ ಶಿವರಾಮ ಹೆಬ್ಬಾರ ಸರ್ ಸಹಕಾರ ನೀಡಿದ್ದಾರೆ. ಆದರೆ ಎಸ್‌ಸಿ/ಎಸ್ಟಿ ಗುತ್ತಿಗೆದಾರರಿಗೆ ಇಂತಿಷ್ಟು ಪ್ರಮಾಣದ ರಿಜರವೇಶನ್ ಕಾಮಗಾರಿ ನೀಡಬೇಕು ಎಂದು ಜಾರಿಗೆ ತಂದವರು ನಮ್ಮ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರು ಎಸ್‌ಸಿ/ಎಸ್ಟಿ ಗುತ್ತಿಗೆದಾರರಿಗೆ ನೀಡಿದ ಸಹಕಾರ ನಾವು ಅವರ ಫೋಟೊ ಇಟ್ಟು ಪೂಜೆ ಮಾಡಬೇಕು ಎಂದರು.
  ನೀವು ನಮ್ಮ ಜನಪ್ರತಿನಿಧಿಯಿಂದ ಸಹಕಾರ ಪಡೆದುಕೊಮಡು ಇಷ್ಟೊಂದು ಮೇಲೆ ಬರಲು ಸಾಧ್ಯವಾಗಿದೆ ಅದಕ್ಕಾಗಿ ಕೈಯಲ್ಲಿ ಉಂಗರು ಕಾರು ತೆಗೆದುಕೊಂಡಿದ್ದಿಯಾ, ಫ್ಯಾಕ್ಟರಿ ಡೆವಲಪ್‌ಮೆಂಟ್ ಮಾಡಿದ್ದಿಯಾ ನಮ್ಮ ಜನಪ್ರತಿನಿಧಿಗೆ ಸರ್ ಹಚ್ಚಿ ಮಾತಾಡಬೇಕು ಎಂದು ಜನಪ್ರತಿನಿಧಿಯ ಆಪ್ತ ಸಹಾಯಕ ನನಗೆ ಆವಾಜ ಹಾಕುತ್ತಾನೆ. ನನಗೆ ಆವಾಜ ಹಾಕಿದರೆ ನಾನು ಸಹಿಸಿಕೊಳ್ಳುವುದಿಲ್ಲ ಎಂದರು. ಹೆಬ್ಬಾರ ಸಾಹೇಬರು ಯಾವತ್ತು ನನಗೆ ಒಳ್ಳೆಯದನ್ನೆ ಬಯಸಿದ್ದಾರೆ ನನ್ನ ಮುಂದುವರೆಕೆಗೆ ಬೆನ್ನು ಚಪ್ಪರಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಿದ್ದ ಉಡುಪು ಘಟಕದ ವ್ಯವಸ್ಥಾಪಕ ನಾಯರ ಹಾಗೂ ದಲಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ ಇದ್ದರು

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top