ಹೊನ್ನಾವರ: ರಾಷ್ಟ್ರೀಯ ಮೀನುಗಾರರ ಸಂಘಟನೆ ಹಾಗೂ ಅಳ್ಳಂಕಿಯ ಸ್ಪಂದನ ಸಮಾಜ ಸೇವಾ ಬಳಗ, ಕಾಸರಕೋಡಿನ ಕರಾವಳಿ ಮೀನುಗಾರರ ಕಾರ್ಮಿಕರ ಮತ್ತು ಪರ್ಸಿನ್ ಬೋಟ್ ಮಾಲಕರ ಸಂಘದ ನೇತ್ರತ್ವ ಹಾಗೂ ಕಾಸರಕೋಡ ಗ್ರಾಮ ಪಂಚಾಯತ ಮತ್ತು ವಿವಿಧ ಸ್ಥಳೀಯ ಮೀನುಗಾರ ಸಂಘಟನೆಗಳ, ಇನ್‌ವಾಯಸ್, ಟ್ಯಾಗ್‌ಸ್ಕಿಲ್ ಮುಂತಾದವರ ಸಹಯೋಗದಲ್ಲಿ ನ.13ರ ಬೆಳಿಗ್ಗೆ 9ಕ್ಕೆ ತಾಲೂಕಿನ ಕಾಸರಕೋಡಿನ ಸ್ನೇಹಕುಂಜದ ವಿವೇಕಾನಂದ ಆರೋಗ್ಯ ಧಾಮದಲ್ಲಿ ಮಂಗಳೂರಿನ ಎಜೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ನುರಿತ ತಜ್ಞ ವೈದ್ಯರ ತಂಡದಿಂದ, ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ, ಹೃದಯ ಸಂಭಂದಿ ಕಾಯಿಲೆ ತಪಾಸಣೆ, ಕಣ್ಣಿನ ತಪಾಸಣೆ, ದಂತ ತಪಾಸಣೆ ಮತ್ತು ಚಿಕಿತ್ಸೆ, ಸಂದು ವಾತ-ಎಲುಬು ಮತ್ತು ಕೀಲುರೋಗ, ಚರ್ಮ ರೋಗ, ಕಿವಿ ಮೂಗು ಮತ್ತು ಗಂಟಲು ತಪಾಸಣೆ, ಮೂತ್ರಾಂಗ ರೋಗ ತಪಾಸಣೆಗೆ ಅವಕಾಶವಿರುತ್ತದೆ. ಶಿಬಿರದಲ್ಲಿ ಇಸಿಜಿ ಮತ್ತು ಮಧುಮೇಹ/ಸಕ್ಕರೆ ಕಾಯಿಲೆ ಪರೀಕ್ಷೆ, ಮತ್ತು ಔಷಧಿ ಉಚಿತವಾಗಿರುತ್ತದೆ. ಅಗತ್ಯ ಇರುವ ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕವನ್ನು ಸಹ ವಿತರಿಸಲಾಗುವುದು. ಸಾರ್ವಜನಿಕರು ಈ ಶಿಬಿರದ ಲಾಭ ಪಡೆದುಕೊಳ್ಳಬೇಕೆಂದು ಸ್ಪಂದನ ಸಮಾಜ ಸೇವಾ ಬಳಗದ ಅಧ್ಯಕ್ಷ ಚಂದ್ರಕಾಂತ ಕೊಚರೇಕರ, ಕಾಸರಕೋಡ ಗ್ರಾಮ ಪಂಚಾಯತ ಅಧ್ಯಕ್ಷ ಮಂಜು ಗೌಡ, ಸ್ಥಳೀಯ ಮೀನುಗಾರ ಸಂಘಟನೆಗಳ ರಾಜೇಶ ತಾಂಡೇಲ, ಹಮಜಾ ಪಟೇಲ, ಗಣಪತಿ ತಾಂಡೇಲ, ಪ್ರೀತಿ ತಾಂಡೇಲ, ಜಗದೀಶ ತಾಂಡೇಲ ಇನ್ನೂ ಮುಂತಾದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ. 13ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ
