Slide
Slide
Slide
previous arrow
next arrow

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕುಂದು ಕೊರತೆ ಸಭೆ

300x250 AD

ಕಾರವಾರ : ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಉತ್ತರ ಕನ್ನಡ ಜಿಲ್ಲಾ ಘಟಕ ಕಾರವಾರ ಇವರ ಕೋರಿಕೆಯ ಮೇರೆಗೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕುಂದು ಕೊರತೆ ಕುರಿತು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಭೆ ಜರುಗಿತು.

ಹೆಚ್ಚುವರಿ ಪ್ರಭಾರ ಹೊಂದಿದ ಪಿಡಿಓಗಳಿಗೆ ಕಾಲಕಾಲಕ್ಕೆ ಪ್ರಭಾರ ಭತ್ಯೆಯನ್ನು ಪಾವತಿಸಬೇಕು.
ಸಾಮಾಜಿಕ ಲೆಕ್ಕ ಪರಿಶೋಧಕರಿಂದ ತಾಲೂಕಾ ಮಟ್ಟದಲ್ಲಿ ಜರುಗುವ ಗ್ರಾಮ ಸಭೆಗಳಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ:ವಾಸ್ತವವಾಗಿ ಸಾಮಾಜಿಕ ಲೆಕ್ಕ ಪರಿಶೋಧಕರು ನರೇಗಾ ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಬಗ್ಗೆ ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸಬೇಕಾಗಿದ್ದು, ಅದನ್ನು ಹೊರತುಪಡಿಸಿ 15ನೇ ಹಣಕಾಸು ಮತ್ತು ಇತರೇ ಅಭಿವೃದ್ಧಿ ಕಾಮಗಾರಿಗಳನ್ನು ಕೇಂದ್ರಿಕರಿಸಿಕೊಂಡು ತಾಲೂಕಾ ಮಟ್ಟದಲ್ಲಿ ತುಂಬಾ ಸಮಸ್ಯೆಯನ್ನು ಉಂಟಾಗುತ್ತಿವೆ. ಭಟ್ಕಳ ತಾಲೂಕಿನ ಸಾಮಾಜಿಕ ಲೆಕ್ಕ ಪರಿಶೋಧಕರನ್ನು ತಕ್ಷಣವೇ ಬದಲಾಯಿಸುವಂತೆ ಭಟ್ಕಳ ಪಿಡಿಓಗಳು ಆಗ್ರಹಿಸಿದರು.

ಹಿರಿಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ತಾಲೂಕುಗಳಲ್ಲಿ ಖಾಲಿ ಇರುವ ನರೇಗಾ ಸಹಾಯಕ ನಿರ್ದೇಶಕರು, (ಗ್ರಾಮೀಣ ಉದ್ಯೋಗ) ಹುದ್ದೆಗಳಿಗೆ ಸ್ವತಂತ್ರ ಪ್ರಭಾರದಲ್ಲಿ ನೇಮಕ, ಗ್ರಾಮ ಪಂಚಾಯತಿ ಸಿಬ್ಬಂದಿ ನೇಮಕಾತಿ ಮತ್ತು ಬಡ್ತಿ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳ ಜೇಷ್ಠತಾಪಟ್ಟಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ತಿಳಿಸಿದರು.

ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಸಿಬ್ಬಂದಿಗಳ ನೇಮಕಾತಿ ಬಗ್ಗೆ ಕ್ರಮ ಕೈಗೊಳ್ಳಬೇಕು:
ಹೆಚ್ಚುವರಿ ಡಾಟಾ ಎಂಟ್ರಿ ಆಪರೇಟರಗಳನ್ನು ನೇಮಕಾತಿ ಮಾಡುವಾಗ ಈ ಹಿಂದೆ ಬಾಪೂಜಿ ಸೇವಾ ಕೇಂದ್ರ, ಹಾಗೂ ನರೇಗಾ ಯೋಜನೆಯಲ್ಲಿ ಕಾರ್ಯನಿರ್ವಹಿಸದವರಿಗೆ ಪ್ರಥಮ ಪ್ರಾಶಸ್ತ್ಯದ ಮೇರೆಗೆ ಅವರ ಸೇವೆಯನ್ನು ಪರಿಗಣಿಸಬೇಕು. ಗ್ರಾಮ ಪಂಚಾಯತಗಳಲ್ಲಿ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಇರುವಂತೆ ಕಚೇರಿ ಕೈಪಿಡಿ ವ್ಯವಸ್ಥೆಯಲ್ಲಿರುವಂತೆ ನಿಯಮಾವಳಿಗಳನ್ನು ಅನುಸರಿಸುವುದು, ಕಡತವನ್ನು ನಿರ್ವಹಿಸುವುದು ಹಾಗೂ ನೋಟ್‌ಶೀಟ್ ಪದ್ದತಿಯನ್ನು ಅಳವಡಿಸಲು ಸುತ್ತೋಲೆ ಹೊರಡಿಸುವಂತೆ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದರು.

ಪಿಡಿಓಗಳ ಅಧಿಕಾರ ಹಾಗೂ ಅಧ್ಯಕ್ಷರ ಅಧಿಕಾರದ ಬಗ್ಗೆ ಸ್ಪಷ್ಟತೆ ಇಲ್ಲ, ಕಡತ ನಿರ್ವಹಣೆ ಹಾಗೂ ಕಡತ ವಿಂಗಡಣೆ, ಅನ್ಯ ಇಲಾಖೆಗಳು ವಹಿಸುತ್ತಿರುವ ಕಾರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕಂದಾಯ ಇಲಾಖೆಯವರು ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ಗಮನಕ್ಕೆ ತರದೇ ನೇರವಾಗಿ ದಬ್ಬಾಳಿಕೆ ಮನೋಭಾವದಿಂದ ಕೆಲಸಗಳನ್ನು ವಹಿಸುತ್ತಿರುವ ಬಗ್ಗೆ ಪಿಡಿಓಗಳು ತೀವ್ರ ವಿಷಾದಿಸಿದರು.

300x250 AD

ಬೆಳೆ ಕಟಾವು, ಬೆಳೆ ಸಮೀಕ್ಷೆ, ಬೆಳೆ ಸರ್ವೆ ಬಗ್ಗೆ ಜಿ.ಪಂ ಹಾಗೂ ತಾ.ಪಂ ಗಮನಕ್ಕೆ ತರದೇ ನೇರವಾಗಿ ಜವಾಬ್ದಾರಿ ವಹಿಸಲಾಗುತ್ತಿದೆ. ಗ್ರಾ.ಪಂ ಗಳ ಮೂಲಕ ಯಾವುದೇ ಕಾರ್ಯ ಆಗಬೇಕಾದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವರ ಗಮನಕ್ಕೆ ತಂದು ಅವರ ಸೂಚನೆ/ನಿರ್ದೇಶನದ ಮೇರೆಗೆ ಜವಾಬ್ದಾರಿ ವಹಿಸಬೇಕು.

ಕೆರೆ ಮತ್ತು ಸ್ಮಶಾನದ ಜಾಗದ ಬಗ್ಗೆ ಸಮಗ್ರ ಸರ್ವೆ ಕಾರ್ಯ, ಜಿಲ್ಲಾ ಘಟಕ ಕಾರವಾರಕ್ಕೆ ಜಿಲ್ಲಾ ಪಂಚಾಯತ ಸಂಪನ್ಮೂಲ ಕೇಂದ್ರದಲ್ಲಿ ಕಚೇರಿಯನ್ನು ತೆರೆಯಬೇಕು. ಪಂಚತಂತ್ರ ತಂತ್ರಾಂಶ ಬಗ್ಗೆ ತೀವ್ರ ಸಮಸ್ಯೆ ಇದ್ದು, ಸದ್ರಿ ಸಮಸ್ಯೆಯನ್ನು ನರೇಗಾ ಯೋಜನೆಯ ತಾಂತ್ರಿಕ ಸಂಯೋಕರ ಸಹಯೋಗದೊಂದಿಗೆ ಪರಿಹರಿಸಬೇಕು.

ವೈದ್ಯಕೀಯ ಭತ್ಯೆಯನ್ನು CGHS ದರಪಟ್ಟಿಯ ಆಧಾರದ ಮೇಲೆ ಮಂಜೂರಿ ಮಾಡಬೇಕು.
ಸ್ಥಳೀಯ ಲೆಕ್ಕ ಪರಿಶೋಧನೆಯ ಲೆಕ್ಕ ಪರಿಶೋಧನಾ ಕಂಡಿಕೆಗಳಿಗೆ ಅಡಹಾಕ್ ಸಮಿತಿ ಸಭೆಗಳನ್ನು ಕಾಲಕಾಲಕ್ಕೆ ಜರುಗಿಸಿ ತ್ವರಿತವಾಗಿ ನಿರ್ಣಯ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

Share This
300x250 AD
300x250 AD
300x250 AD
Back to top