Slide
Slide
Slide
previous arrow
next arrow

ಭಾರತೀಯರು ಪ್ರತಿಭಾವಂತರು: ರಷ್ಯಾ ಅಧ್ಯಕ್ಷ ಪುಟಿನ್

300x250 AD

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮತ್ತೊಮ್ಮೆ ಭಾರತವನ್ನು ಹಾಡಿ ಹೊಗಳಿದ್ದಾರೆ. ಭಾರತೀಯರನ್ನು ಪ್ರತಿಭಾವಂತರು ಎಂದಿರುವ ಅವರು, ಭಾರತವು ಅಭಿವೃದ್ಧಿಯ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ.

ನವೆಂಬರ್ 4 ರಂದು ರಷ್ಯಾದ ಏಕತಾ ದಿನದ ಸಂದರ್ಭವನ್ನು ಗುರುತಿಸುವ ಸಮಾರಂಭದಲ್ಲಿ ಭಾಷಣ ಮಾಡಿದ ಪುಟಿನ್‌, ಭಾರತವು ಹೆಚ್ಚಿನ ಸಾಮರ್ಥ್ಯವನ್ನು. ಭಾರತವು ತನ್ನ ಅಭಿವೃದ್ಧಿಯ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುತ್ತದೆ ಎಂಬುದರಲ್ಲಿ ಯಾವುದೇ ಸಂದೇಹಗಳಿಲ್ಲ ಮತ್ತು ಸುಮಾರು ಒಂದೂವರೆ ಶತಕೋಟಿ ಜನರಿಂದಾಗಿ ಈಗ ಅದು ಸಂಭಾವ್ಯವಾಗಿದೆ” ಎಂದಿದ್ದಾರೆ/

ಭಾಷಣದಲ್ಲಿ ರಷ್ಯಾದ ಅಧ್ಯಕ್ಷರು ಆಫ್ರಿಕಾದಲ್ಲಿ ವಸಾಹತುಶಾಹಿ, ಭಾರತದ ಸಾಮರ್ಥ್ಯ ಮತ್ತು ರಷ್ಯಾ ಹೇಗೆ ‘ವಿಶಿಷ್ಟ ನಾಗರಿಕತೆ ಮತ್ತು ಸಂಸ್ಕೃತಿಯನ್ನು’ ಹೊಂದಿದೆ ಎಂಬುದರ ಕುರಿತು ಮಾತನಾಡಿದರು. ರಷ್ಯಾದ ಮತ್ತು ಜಾಗತಿಕ ಇತಿಹಾಸದ ಬಗ್ಗೆ ಭಾಷಣ ಮಾಡುವಾಗ ಪಾಶ್ಚಿಮಾತ್ಯ ಸಾಮ್ರಾಜ್ಯಗಳು ಆಫ್ರಿಕಾವನ್ನು ದೋಚಿದವು ಎಂದು ಪುಟಿನ್ ಹೇಳಿದ್ದಾರೆ.

300x250 AD

“ವಸಾಹತುಶಾಹಿ ಶಕ್ತಿಗಳು ಸಾಧಿಸಿದ ಸಮೃದ್ಧಿಗೆ ಆಫ್ರಿಕಾವನ್ನು ದರೋಡೆ ಮಾಡಿದ್ದೇ ಕಾರಣ. ಎಲ್ಲರಿಗೂ ಇದು ತಿಳಿದಿದೆ. ಯುರೋಪಿನ ಸಂಶೋಧಕರು ಕೂಡ ಇದನ್ನು ಮರೆಮಾಡುವುದಿಲ್ಲ. ಆದರೆ ಅವರು ಯುರೋಪಿನ ಸಮೃದ್ಧಿಯನ್ನು ಆಫ್ರಿಕನ್ ಜನರ ದುಃಖ ಮತ್ತು ಸಂಕಟದ ಮೇಲೆ ನಿರ್ಮಿಸಲಾಗಿದೆ ಎಂದು  ಸಂಪೂರ್ಣವಾಗಿ ಹೇಳುತ್ತಿಲ್ಲ” ಎಂದಿದ್ದಾರೆ.

ಕೃಪೆ :http://news13.in

Share This
300x250 AD
300x250 AD
300x250 AD
Back to top