ಜೋಯಿಡಾ : ತಾಲೂಕಿನ ಬುಡಕಟ್ಟು ಕುಣಬಿಗಳ ಸಾಂಪ್ರದಾಯಿಕ ಖಾಪ್ರಿ ದೇವರ ಜಾತ್ರೆ ರವಿವಾರ ನವಂಬರ್ 6 ರಂದು ನಡೆಯಲಿದೆ .
ಬುಡಕಟ್ಟು ಕುಣಬಿಗಳ ಖಾಪ್ರಿ ದೇವ ಗ್ರಾಮವನ್ನು ಕಾಯುವ ಪ್ರಮುಖ ದೇವರಾಗಿದ್ದಾನೆ. ಖಾಪ್ರಿ ದೇವರ ಎರಡು ಆತ್ಮಗಳು ಗ್ರಾಮದ ಸುತ್ತಲೂ ತಿರುಗುತಿದ್ದು ದುಷ್ಟ ಶಕ್ತಿಗಳನ್ನು ದಮನ ಮಾಡುವ ಶಕ್ತಿ ಹೊಂದಿದೆ. ರಾತ್ರಿ ಹೊತ್ತಿನಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಲಾಗುತ್ತದೆ. ಈ ದೇವರಿಗೆ ಜುಟ್ಚ ಕಟ್ಟಿ ಮಾಳೆಯ ಮೇಲೆ ಇಡಲಾಗುತ್ತದೆ. ಈ ಸಾಂಪ್ರದಾಯ ಇಂದಿಗೂ ಪಾಲಿಸಲಾಗುತ್ತಿದ್ದು ಇದು ಇಲ್ಲಿನ ಜನರ ನಂಬಿಕೆಯಾಗಿದೆ.
ಹಾಡಿನಲ್ಲಿ ಬುಡಕಟ್ಟುಗಳು ಜಾನಪದ ಸೊಗಡನ್ನು ಪ್ರದರ್ಶನ ಮಾಡುತ್ತಿರುವುದು ಜಾತ್ರೆಯ ವಿಶೇಷವಾಗಿದೆ. ಖಾಪ್ರಿ ದೇವರ ಮೈ ಮೇಲೆ ಸಂಪೂರ್ಣವಾಗಿ ಕಂಬಳಿ ಸುತ್ತಲಾಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಕಂಬಳಿಗೆ ಬಲು ಬೇಡಿಕೆ ಬಂದಿದೆ.
ಕಂಬಳಿ ವ್ಯಾಪಾರ ಜೋರು –
ಜಾತ್ರೆ ಪ್ರಾರಂಭವಾಗುವ 15 ದಿನ ಮುಂಚಿತವಾಗಿ ಕಂಬಳಿ ಮಾರಾಟಗಾರರು ಪ್ರತಿ ಹಳ್ಳಿಗಳಿಗೆ ಹೋಗಿ ಕಂಬಳಿ ಮಾರಾಟ ಮಾಡುತಿದ್ದಾರೆ. ಈಗ ಜೋಯಿಡಾ ಕೇಂದ್ರದಲ್ಲಿ ಅನೇಕ ಕಂಬಳಿ ವ್ಯಾಪಾರಿಗಳು ಠಿಕಾಣಿ ಹೂಡಿದ್ದು ಸ್ಥಳಿಯ ಕಂಬಳಿ ಮಾರಾಟಗಾರರಿಗೆ ಸಂಕಟದಂತಾಗಿದೆ. ಕಡಿಮೆ ದರದಲ್ಲಿ ಕಂಬಳಿ ಮಾರಾಟವಾಗುತ್ತಿರುವುದು ಕಂಡುಬಂದಿದೆ. ಸಾವಿರಾರು ಸಂಖ್ಯೆಯಲ್ಲಿ ಖಾಪ್ರಿ ದೇವರ ಹೆಸರಿನಲ್ಲಿ ಮನೆಯಲ್ಲಿ ಕಂಬಳಿ ಖರೀದಿಸುವುದು ಕಂಡುಬಂದಿದೆ.
ಖಾಪ್ರಿ ದೇವರ ಜಾತ್ರೆ ಎರಡು ದಿನ ನಡೆಯಲಿದೆ. ಪ್ರಮುಖ ಜಾತ್ರೆ ನವಂಬರ 6 ರಂದು ರವಿವಾರ ನಡೆಯಲಿದೆ. ಭಕ್ತರು ಬಂದು ಜಾತ್ರೆಯಲ್ಲಿ ಪಾಲ್ಗೋಳ್ಳಬೇಕೆಂದು ಆಡಳಿತ ಕಮಿಟಿಯವರು ವಿನಂತಿಸಿದ್ದಾರೆ.