Slide
Slide
Slide
previous arrow
next arrow

ಡಿ.17, 18ಕ್ಕೆ ಉಳವಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ವಾಸರೆ

300x250 AD

ದಾಂಡೇಲಿ: ಉತ್ತರ ಕನ್ನಡ ಜಿಲ್ಲಾ22ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿ.17 ಮತ್ತು 18ರಂದು ಜೊಯಿಡಾ ತಾಲೂಕಿನ ಶ್ರೀಕ್ಷೇತ್ರ ಉಳವಿಯಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ತಿಳಿಸಿದ್ದಾರೆ.
ಈ ಹಿಂದೆ 2005ರ ಮಾ.12, 13ರಂದು ಜೊಯಿಡಾದಲ್ಲಿ ೧೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಇದೀಗ 17 ವರ್ಷಗಳ ನಂತರ ಮತ್ತೆ ಜೊಯಿಡಾದ ಶ್ರೀಕ್ಷೇತ್ರ ಉಳವಿಯಲ್ಲಿ 22ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಹಲವು ಹೊಸತನ ಹಾಗೂ ವೈಶಿಷ್ಟ್ಯತೆಗಳೊಂದಿಗೆ ಈ ಸಮ್ಮೆಳನ ನಡೆಯಲಿದೆ. ಸುಂದರವಾದ ಪರಿಸರ ಮತ್ತು ಕಾಡು ಮೇಡುಗಳಿಂದ ಆವೃತ್ತವಾಗಿರುವ ಜೊಯಿಡಾ ತಾಲೂಕಿನ ಐತಿಹಾಸಿಕ ಸ್ಥಳ, ಷಟಸ್ಥಲ ಜ್ಞಾನಿ ಚನ್ನಬಸವಣ್ಣನ ಪುಣ್ಯ ನೆಲ ಸುಕ್ಷೇತ್ರ ಉಳವಿಯಲ್ಲಿ ನಮ್ಮ ಅವಧಿಯ ಮೊದಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಎರಡು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ದಿನದ ಉದ್ಘಾಟನಾ ಸಮಾರಂಭ, ಎರಡನೇ ದಿನದ ಸಮಾರೋಪ ಸಮಾರಂಭದ ನಡುವೆ ಹಲವು ವೈಶಿಷ್ಟ್ಯಪೂರ್ಣ ವಿಚಾರಗೋಷ್ಠಿ, ಕವಿಗೋಷ್ಠಿ, ಉಪನ್ಯಾಸ ಕಾರ್ಯಕ್ರಮ, ಸಾಧಕರ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಮ್ಮೇಳನದಲ್ಲಿ ಜಿಲ್ಲೆಯ ಬುಡಕಟ್ಟುಗಳ ಬಗ್ಗೆ, ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕೃತಿ, ಕವಿ- ಕಲಾವಿದರ ಬವಣೆ, ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ, ಪರಿಸರ ಮತ್ತು ಪ್ರವಾಸೋದ್ಯಮ, ಜನಪದ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಹಾಗೂ ವಚನ- ವಿಚಾರಗಳು ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಉಪನ್ಯಾಸ ಮತ್ತುಗೋಷ್ಠಿಗಳನ್ನು ನಡೆಸಲಾಗುತ್ತದೆ. ಇವುಗಳ ಜೊತೆಗೆ ಸಮ್ಮೇಳನದ ಆಯೋಜನೆಯಲ್ಲಿ ಹಿರಿಯರಿಂದ ಬರುವ ಸಲಹೆಗಳನ್ನೂ ಕೂಡಾ ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಮ್ಮೇಳನದ ಯಶಸ್ಸಿಗೆ ಜಿಲ್ಲೆಯ ಎಲ್ಲ ಸಾಹಿತ್ಯಾಸಕ್ತರು, ಎಲ್ಲ ಸಮಾಜಮುಖಿ ಸಂಘಟನೆಯವರು, ಎಲ್ಲ ಕನ್ನಡಪರ ಸಂಘಟಕರು, ನಾಡು- ನುಡಿಯ ಚಿಂತಕರು, ಅದರಲ್ಲೂ ಹೆಚ್ಚಾಗಿ ಜೊಯಿಡಾ ತಾಲೂಕಿನ ಆಡಳಿತ ಹಾಗೂ ಸಮಸ್ತ ಸಹೃದಯಿ ನಾಗರಿಕರು ಸಹಕರಿಸುವಂತೆ ಅಧ್ಯಕ್ಷ ಬಿ.ಎನ್.ವಾಸರೆ, ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ಜಾರ್ಜ್ ಫರ್ನಾಂಡೀಸ್, ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ ಜಂಟಿಯಾಗಿ ಮನವಿ ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top