• Slide
    Slide
    Slide
    previous arrow
    next arrow
  • ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಅನುದಾನವನ್ನು ನೀಡಲಾಗಿದೆ-ಕಾಗೇರಿ

    300x250 AD

    ಸಿದ್ದಾಪುರ; ಗ್ರಾಮೀಣ ಅಭಿವೃದ್ದಿಗಾಗಿ ಸಾಕಷ್ಟು ಅನುದಾನವನ್ನು ನೀಡಲಾಗಿದೆ. ತಾಲೂಕಿಗೆ ರೈತರ ಅನುಕೂಲಕ್ಕಾಗಿ ವಿಶೇಷ ಪ್ರಯತ್ನದಿಂದ ರೂ.13.ಕೋಟಿಗಳಷ್ಟು ಅನುದಾನದ ಸುಮಾರು 11 ಸೇತುವೆ ಸಹಿತ ಕಿಂಡಿ ಆಣೆಕಟ್ಟುಗಳನ್ನು ಮಂಜೂರಿ ಮಾಡಲಾಗಿದೆ. ತಾಲೂಕಿನ ಹಳ್ಳಿಗಳಲ್ಲಿ ರಸ್ತೆ ಕಾಮಗಾರಿಗಳನ್ನು, ಸೇತುವೆಗಳನ್ನು ಶಾಲಾ ಕಟ್ಟಡಗಳನ್ನು,ಅಂಗನವಾಡಿಗಳನ್ನು,ನೀರಾವರಿ ಯೋಜನೆಗಳನ್ನು ಹೀಗೆ ಹತ್ತು ಹಲಾವಾರು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನವನ್ನು ವಿಶೇಷ ಪ್ರಯತ್ನದಿಂದ ಮಂಜೂರಿ ಮಾಡಲಾಗಿದೆ ಎಂದು ವಿಧಾನಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
    ಅವರು ತಾಲೂಕಿನ ಕೊರ್ಲಕೈ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಎಲ್ಲ ಕಾಮಗಾರಿಗಳು ಗುಣಮಟ್ಟದಲ್ಲಿ ಆಗಬೇಕು ಇದಕ್ಕೆ ಜನಪ್ರತಿನಿಧಿಗಳ ಹಾಗೂ ಊರನಾಗರಿಕರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
    ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನಟರಾಜ ಮೈಲಪ್ಪ ಜಿಡ್ಡಿ, ಉಪಾಧ್ಯಕ್ಷರಾದ ಸುಮನಾ ವೆಂಕಟೇಶ ಹರಿಜನ, ಸದಸ್ಯರಾದ ಮಂಜಪ್ಪ ದ್ಯಾವಪ್ಪ ಭದ್ರನ್, ಮಂಜುನಾಥ ರಾಮಾ ಮಡಿವಾಳ, ಕಲಾವತಿ ರಾಜೇಶ ನಾಯ್ಕ, ಪ್ರಮುಖರಾದ ತಿಮ್ಮಪ್ಪ ಹೆಗಡೆ ಮುಸವಳ್ಳಿ, ಗುರುಮೂರ್ತಿ ಹೆಗಡೆ, ಶ್ರೀನಿವಾಸ ಮಡಿವಾಳ ಹೆಗ್ಗೆಕೊಪ್ಪ, ತಿಮ್ಮಪ್ಪ ಮಡಿವಾಳ ಜಿಡ್ಡಿ, ಚಂದ್ರಶೇಖರ ಈರಪ್ಪಯ್ಯ ಗೌಡ, ಆನಂದ ನಾಯ್ಕ ಪುರದಮಠ, ತಿಮ್ಮಪ್ಪ ಎಮ್.ಕೆ. ಪದ್ಮಾವತಿ ಬಂಗಾರ್ಯ ಮಡಿವಾಳ, ಮಂಜುನಾಥ ಹೆಗಡೆ ಮುಸವಳ್ಳಿ, ನಾರಾಯಣ ಭಟ್ಟ ಮುಸವಳ್ಳಿ, ಮಂಜಪ್ಪ ಟಿ.ದೇವಾಡಿಗ,ಗಣಪತಿ ತಿ.ಮಡಿವಾಳ, ಮಾಬ್ಲೇಶ್ವರ ಕೃಷ್ಣಾ ಮಡಿವಾಳ. ದೇವೇಂದ್ರ ಟಿ.ನಾಯ್ಕ, ಇಒ ಪ್ರಶಾಂತ ರಾವ್, ಬಿಇಒ ಸದಾನಂದ ಸ್ವಾಮಿ, ಚಿಕ್ಕ ನೀರಾವರಿ ಇಲಾಖೆಯ ಎಇಇ ಬಸವರಾಜ, ಪಂಚಾಯತ ರಾಜ್ ಇಂಜಿನೀಯರಿಂಗ್ ಎಇಇ ಕುಶುಮಾ ಹೆಗಡೆ, ಸಿಪಿಐ ಕುಮಾರ, ಪಿಡಿಒ ನಟರಾಜ್ ಹಾಗೂ ಊರನಾಗರೀಕರು ಉಪಸ್ಥಿತರಿದ್ದರು.

    ಕೊರ್ಲಕೈ ಗ್ರಾಮ ಪಂಚಾಯತ ವ್ಯಾಪತ್ರಿಯಲ್ಲಿ ರೂ.25 ಲಕ್ಷಗಳ ಅನುದಾನ ಮಂಜೂರಿಯಾದ ಮುಸವಳ್ಳಿ ರಸ್ತೆ ಕಾಮಗಾರಿಯ ಶಂಕುಸ್ಥಾಪನೆ, ರೂ.11.ಲಕ್ಷಗಳ ಅನುದಾನ ಮಂಜೂರಿಯಾದ ಆಡುಕಟ್ಟಾ ಸ.ಹಿ.ಪ್ರಾ ಶಾಲೆಯ ನೂತನ ಕಟ್ಟಡ ಉದ್ಘಾಟನೆ ರೂ. 1.50 ಕೋಟಿಗಳ ಅನುದಾನ ಮಂಜೂರಿಯಾದ ಹೆಗ್ಗೆಕೊಪ್ಪ ಗಡಿಬಿಡಿ ಹೊಳೆಗೆ ಸೇತುವೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ವಿಧಾನಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top