ಹೊನ್ನಾವರ: ತಾಲೂಕಿನ ಗುಣವಂತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕಿ ವೀಣಾ ಶಾನಭಾಗ ಅವರನ್ನು ಶಾಲೆಯ ಮತ್ತು ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ, ಶಿಕ್ಷಕರಾಗಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ವೀಣಾ ಶಾನಭಾಗ ಅವರು ಮಕ್ಕಳ ಪ್ರೀತಿ ಗಳಿಸಿದ್ದಾರೆ. ಅತ್ಯಂತ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸಿ ಈಗ ನಿವ್ರತ್ತಿ ಹೊದ್ದಿದ್ದಾರೆ. ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದರು.
ಸಂಘದ ಕಾರ್ಯದರ್ಶಿ ಕೆ.ಎಂ.ಹೆಗಡೆ, ಉಪಾಧ್ಯಕ್ಷ ಸುರೇಶ ನಾಯ್ಕ, ಖಜಾಂಚಿ ಎಂ.ಎನ್.ಗೌಡ, ಜಿಲ್ಲಾ ಸಂಘದ ಪ್ರತಿನಿಧಿ ಸುಧೀಶ ನಾಯ್ಕ, ಸಾಧನಾ ಬರ್ಗಿ, ಸುನಂದಾ ಭಟ್, ಪ್ರತಿಮಾ ಹೆಗಡೆ,
ಸಿಆರ್ಪಿ ರಮೇಶ ಮಲ್ಲಪ್ಪ, ಸದ್ಗುರು ಟ್ರಸ್ಟ್ ಗೌರವಾಧ್ಯಕ್ಷ ಮಹಾದೇವ ಪಂಡಿತ ಇತರರಿದ್ದರು. ಶಿಕ್ಷಕಿ ಮಹಾದೇವಿ ಗೌಡ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ವಿ.ಜಿ.ಭಟ್ ನಿರ್ವಹಿಸಿದರು.