Slide
Slide
Slide
previous arrow
next arrow

ತಂಝೀಮ್ ಸಂಸ್ಥೆಗೆ ಶಾಬಂದ್ರಿ ಸಾರಥ್ಯ

300x250 AD

ಭಟ್ಕಳ: ಇಲ್ಲಿನ ಶತಮಾನ ಪೂರೈಸಿದ ಸಾಮಾಜಿಕ, ರಾಜಕೀಯ ಸಂಘಟನೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಗೆ ಜೆಡಿಎಸ್ ಮುಖಂಡ ಇನಾಯತ್ ಉಲ್ಲಾ ಶಾಬಂದ್ರಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಗುರುವಾರ ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಝಮ್ಮಿಲ್ ಕಾಝಿಯಾ ರವರ ಅಧ್ಯಕ್ಷತೆಯಲ್ಲಿ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ತನ್ನ ಪ್ರತಿಸ್ಪರ್ಧಿ ನಿಕಟಪೂರ್ವ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವೇಝ್ ಅವರ ವಿರುದ್ಧ ಕೇವಲ ಒಂದು ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಪ್ರಧಾನಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದ ಅಬ್ದುಲ್ ರಕೀಬ್ ಎಂ.ಜೆ. ತನ್ನ ಮೊದಲಿನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನಾಯತುಲ್ಲಾ ಅವರು ಈ ಹಿಂದೆ ತಂಝೀಮ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, 2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರದಿಂದ ತಂಝೀಮ್ ಬೆಂಬಲದೊಂದಿಗೆ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿ ಮಾಂಕಾಳ್ ವೈದ್ಯರ ವಿರುದ್ಧ ಸೋಲನ್ನು ಕಂಡಿದ್ದರು.
ಪ್ರಥಮ ಉಪಾಧ್ಯಕ್ಷರಾಗಿ ರಾಬಿತಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅನಿವಾಸಿ ಭಾರತೀಯ ಉದ್ಯಮಿ ಅತೀಕುರ್ ರಹಮಾನ್ ಮುನಿರಿ ಅವರು ಸತತ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಮೊಹ್ತಿಶಮ್ ಮುಹಮ್ಮದ್ ಹಾಶಿಮ್ ಉಪಾಧ್ಯಕ್ಷ-2 ಮತ್ತು ರುಕ್ನುದ್ದೀನ್ ಮೊಹಿದ್ದೀನ್ ಕೊಚ್ಚುಬಾಪ ಉಪಾಧ್ಯಕ್ಷ-3 ಆಗಿ ಆಯ್ಕೆಗೊಂಡಿದ್ದಾರೆ.
ಶಾಬಂದ್ರಿ ಮೊಹಿದ್ದೀನ್ ಜೀಲಾನಿ ಅವರು ಎರಡನೇ ಅವಧಿಗೆ ತಮ್ಮ ಆಡಳಿತ ಕಾರ್ಯದರ್ಶಿ ಸ್ಥಾನವನ್ನು ಉಳಿಸಿಕೊಂಡಿದ್ದು, ಮುಅಲ್ಲಿಮ್ ಮುಹಮ್ಮದ್ ಹುಸೇನ್ ಹಣಕಾಸು ಕಾರ್ಯದರ್ಶಿಯಾಗಿ ನೂತನವಾಗಿ ಆಯ್ಕೆಗೊಂಡಿದ್ದಾರೆ. ಇಕ್ಬಾಲ್ ಸುಹೇಲ್ ಜಾವೀದ್ ಲೆಕ್ಕ ಪರಿಶೋಧಕರಾಗಿ ಆಯ್ಕೆಗೊಂಡಿದ್ದಾರೆ.
ಈ ಎಲ್ಲ ಹುದ್ದೆಗಳು ಮೂರು ವರ್ಷದ ಅವಧಿಗಾಗಿ ಇರುತ್ತವೆ ಎಂದು ತಿಳಿದುಬಂದಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 81 ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಮುಹಿದ್ದೀನ್ ಅಲ್ತಾಫ್ ಖರೂರಿ ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದು, ಮೌಲಾನ ಸೈಯದ್ ಯಾಸೀರ್ ಬರ್ಮಾವರ್ ನದ್ವಿ ಮತ್ತು ಮುಹಮ್ಮದ್ ಯೂನೂಸ್ ರುಕ್ನುದ್ದೀನ್ ರವರ ಮೇಲ್ವಿಚಾರಣೆಯಲ್ಲಿ ಚುನಾವಣಾ ಪ್ರಕ್ರಿಯೆ ಸುಗಮವಾಗಿ ನಡೆಯಿತು.

300x250 AD
Share This
300x250 AD
300x250 AD
300x250 AD
Back to top