• Slide
  Slide
  Slide
  previous arrow
  next arrow
 • ಕೆಂಪೇಗೌಡರ ರಥಕ್ಕೆ ಪೂರ್ಣಕುಂಭ ಸ್ವಾಗತ

  300x250 AD

  ಹೊನ್ನಾವರ: ತಾಲೂಕ ಪಂಚಾಯತಿ, ಪಟ್ಟಣ ಪಂಚಾಯತ ಮಂಕಿ ಹಾಗೂ ವಿವಿಧ ಇಲಾಖೆಯ ಸಹಭಾಗಿತ್ವದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣದ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ನಾಡ ತೇರನ್ನು ಮಂಕಿ ಪ.ಪಂ. ಮುಖ್ಯಾಧಿಕಾರಿ ಅಜೇಯ್ ಭಂಡಾರಕರ ಇವರ ಸಾರಥ್ಯದಲ್ಲಿ ಇತಿಹಾಸ ಪ್ರಸಿದ್ಧವಾದ ಶ್ರೀ ಸರ್ವೆಶ್ವರಿ ಆತ್ಮಾನಂದ ಸದ್ಗುರು ಸನ್ನಿದಿ ಗುರುಮಠದ ಮುಖ್ಯ ದ್ವಾರದಿಂದ ಮೆರವಣಿಗೆ ಮುಖಾಂತರ ನಾಡತೇರನ್ನು ಅದ್ಧೂರಿಯಾಗಿ ಪೂರ್ಣ ಕುಂಭದ ಮೂಲಕ ಸ್ವಾಗತಿಸಿಸಲಾಯಿತು.
  ಇದೇ ವೇಳೆ ಶಾಸಕರಾದ ಸುನೀಲ್ ನಾಯ್ಕ, ನಾಡ ಪ್ರಭು ಕೆಂಪೆಗೌಡರ ತೇರಿಗೆ ಪುಷ್ಪ ನಮನ ಸಲ್ಲಿಸುವುದರೊಂದಿಗೆ, ಗೌಡ ಸಮುದಾಯದ ಹೆಮ್ಮೆಯ ನಾಯಕರಾದ ಕೆಂಪೆಗೌಡರ ಕುರಿತು ಮಾತನಾಡಿ ಬೆಂಗಳೂರು ಅಭಿವೃದ್ಧಿಯಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದರು. ಹಾಗೂ ಸಮುದಾಯದ ಸಂಸ್ಕೃತಿ, ಪರೋಪಕಾರ ಭಾವನೆ, ಸಮಾಜದಲ್ಲಿ ಸೌಮ್ಯತೆಯೊಂದಿಗೆ, ಸರ್ವರಲ್ಲಿಯೂ ಒಂದಾಗಿ ಸರ್ವೇ ಜನಾ: ಸುಖಿನೋ ಭವಂತು ಎಂಬ ವಾಕ್ಯದೊಂದಿಗೆ ಕನ್ನಡ ನಾಡನ್ನು ಕಟ್ಟಲು ಹಗಲಿರುಳು ಶ್ರಮಿಸಿ ನೀಡಿದ ಕೊಡುಗೆ ಅವಿಸ್ಮರಣಿಯ ಎಂದರು.
  ಮಂಕಿ ಪುರದ ಇತಿಹಾಸ ಪ್ರಸಿದ್ಧವಾದ ಶ್ರೀ ಸರ್ವೆಶ್ವರಿ ಆತ್ಮಾನಂದ ಸದ್ಗುರು ಸನ್ನಿದಿ ಗುರುಮಠದಲ್ಲಿ ಸಂಗ್ರಹಿಸಲಾದ ಪವಿತ್ರವಾದ ಮಣ್ಣನ್ನು ಹಸ್ತಾಂತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಹತ್ತರ ಕಾರ್ಯದಲ್ಲಿ ಜಿಲ್ಲೆಯಲ್ಲಿ ತೊಡಗಿಸಿಕೊಂಡ ಜಿಲ್ಲಾ ಪಂಚಾಯತ ಅಧಿಕಾರಿ ವಿರುಪಾಕ್ಷ ಪಾಟೀಲ್ ಮತ್ತು ಸುರೇಶ ನಾಯ್ಕ ಸಹಾಯಕ ನೋಡೆಲ್ ಅಧಿಕಾರಿ ಜಿಲ್ಲಾ ಪಂಚಾಯತ ಕಾರವಾರ ಇವರನ್ನು ಅಭಿನಂದಿಸಲಾಯಿತು
  ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯ ಅಂಗನವಾಡಿ ಕಾರ್ಯ ಕರ್ತೆಯರು, ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಸ್ವಸಹಾಯ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಮಂಕಿ ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top