• Slide
  Slide
  Slide
  previous arrow
  next arrow
 • ರಾಜ್ಯೋತ್ಸವ ಕಪ್: ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಮುಕ್ತಾಯ

  300x250 AD

  ದಾಂಡೇಲಿ: ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಶ್ರಯದಡಿ ಸುಭಾಸನಗರದ ಒಳ ಕ್ರೀಡಾಂಗಣದಲ್ಲಿ ಮುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
  ಪಂದ್ಯಾವಳಿಯ ಉದ್ಘಾಟನೆಗೂ ಮುನ್ನ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಹಾಗೂ ಡಾ.ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಗೌರವವನ್ನು ಸಲ್ಲಿಸಲಾಯ್ತು. ಪಂದ್ಯಾವಳಿಯನ್ನು ಖ್ಯಾತ ವಾಲಿಬಾಲ್ ಆಟಗಾರರು ಆಗಿರುವ ಡಿವೈಎಸ್ಪಿ ಗಣೇಶ್ ಕೆ.ಎಲ್ ಅವರು ಉದ್ಘಾಟಿಸಿ ಮಾತನಾಡುತ್ತಾ, ವ್ಯಕ್ತಿತ್ವ ವಿಕಸನದಲ್ಲಿ ಕ್ರೀಡೆಗಳ ಪಾತ್ರ ಮಹತ್ವಪೂರ್ಣವಾಗಿದೆ. ದಾಂಡೇಲಿಯಲ್ಲಿ ಕ್ರೀಡೆ, ಕಲೆ, ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರಕ್ಕೆ ವಿಶೇಷವಾದ ಗೌರವವನ್ನು ನೀಡಲಾಗುತ್ತದೆ. ಕ್ರೀಡೆಗೆ ಎಲ್ಲಿ ಗೌರವವನ್ನು ನೀಡಲಾಗುತ್ತೆದೆಯೋ ಅಲ್ಲಿ ಕ್ರೀಡೆ ಉಜ್ವಲವಾಗಿ ಬೆಳೆಯುವುದರ ಜೊತೆಗೆ ಪ್ರತಿಭೆಗಳ ಸೃಷ್ಟಿ ಸಾಧ್ಯ. ಈ ಮಹೋನ್ನತ ಕರ‍್ಯವನ್ನು ಕಳೆದ ಹಲವು ವರ್ಷಗಳಿಂದ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಶನ್ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಕ್ರೀಡಾ ಕ್ಷೇತ್ರಕ್ಕೆ ನೀಡಿದ ಸಹಕಾರ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಬಲ್ಲುದು ಎಂದು ಹೇಳಿ ಪಂದ್ಯಾವಳಿಗೆ ಶುಭ ಕೋರಿದರು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷರಾದ ಎಸ್.ಪ್ರಕಾಶ ಶೆಟ್ಟಿಯವರು ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಶನಿನ ಮೂಲ ಉದ್ದೇಶ ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಸೂಕ್ತ ತರಬೇತಿ, ಮಾರ್ಗದರ್ಶನವನ್ನು ನೀಡಿ, ಉತ್ತೇಜಿಸುವುದಾಗಿದೆ. ಇದನ್ನು ಅತ್ಯಂತ ಬದ್ಧತೆಯಿಂದ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಶನ್ ಮಾಡುತ್ತಾ ಬಂದಿದೆ ಎಂದರು.
  ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಶನಿನ ಪ್ರಧಾನ ಕಾರ್ಯದರ್ಶಿ ಗುರು ಮಠಪತಿಯವರು ಮಾತನಾಡಿ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.
  ಈ ಸಂದರ್ಭದಲ್ಲಿ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಶನಿನ ಪದಾಧಿಕಾರಿಗಳಾದ ಡಾ.ಸಲ್ಮಾನ್ ಗೈಮಾ, ನವೀನ್ ಕಾಮತ್, ಡಾ.ವಸೀಕ್ ಅಹಮ್ದ್ ಮಳಗಿ, ವಿನೋದ್ ಬಾಂದೇಕರ್, ದೀಪಕ ನಾಯಕ, ಮಿಥುನ್ ನಾಯಕ, ಕುಮಾರ್ ಕರಗಯ್ಯ, ಅಗಸ್ಟಿನ್, ಪ್ರಮೋದ್ ಶಾನಭಾಗ್, ಗುರು ಶೆಣ್ವಿ, ನಕುಲ್ ಕಾಮತ್, ಯಾಸೀರ್ ಮೊದಲಾದವರು ಉಪಸ್ಥೀತರಿದ್ದರು. ಸುರೇಶ್ ಕಾಮತ್ ಅವರು ಸ್ವಾಗತಿಸಿ, ನಿರೂಪಿಸಿದ ಕರ‍್ಯಕ್ರಮಕ್ಕೆ ಅನಂತ್ ಕಾಮತ್ ವಂದಿಸಿದರು.
  ಎರಡು ವಿಭಾಗಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. 35 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಎಸ್.ಪ್ರಕಾಶ ಶೆಟ್ಟಿ ಮತ್ತು ಡಾ.ಸಲ್ಮಾನ್ ಗೈಮಾ ಅವರ ತಂಡ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಅನಂತ್ ಕಾಮತ್ ಮತ್ತು ಮುಕ್ತಾರ್ ಅವರ ತಂಡ ದ್ವಿತೀಯ ಮತ್ತು ಪ್ರೀತಂ ಶೆಟ್ಟಿ ಮತ್ತು ಹೇಮಂತ್ ಅವರ ತಂಡ ತೃತೀಯ ಬಹುಮಾನವನ್ನು ಪಡೆದುಕೊಂಡಿತು. ಮುಕ್ತ ವಿಭಾಗದಲ್ಲಿ ಡಾ.ಸಲ್ಮಾನ್ ಗೈಮಾ ಮತ್ತು ಸುಫಿಯಾನ್ ಅವರ ತಂಡ ಪ್ರಥಮ, ಅಭಯ್ ಮತ್ತು ನಿಹಾಲ್ ಅವರ ತಂಡ ದ್ವಿತೀಯ ಮತ್ತು ನವನೀತ್ ಕಾಮತ್ ಮತ್ತು ಯುವರಾಜ ಅವರ ತಂಡ ತೃತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಡಾ.ಸಲ್ಮಾನ್ ಗೈಮಾ, ಡಾ.ವಸೀಕ್ ಅಹಮ್ಮದ್ ಮಳಗಿ ಮತ್ತು ಯಾಸೀರ್ ಅವರು ಪಂದ್ಯಾವಳಿಯ ಪ್ರಾಯೋಜಕತ್ವವನ್ನು ವಹಿಸಿದ್ದರು. ಪಂದ್ಯಾವಳಿಯ ಯಶಸ್ಸಿಗೆ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಶನಿನ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರಮಿಸಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top