• first
  second
  third
  Slide
  Slide
  previous arrow
  next arrow
 • ದೆಹಲಿ ವಾಯು ಗುಣಮಟ್ಟ ತೀವ್ರ ಕುಸಿತ: ಶಾಲೆಗಳನ್ನು ಮುಚ್ಚಲು ಆಗ್ರಹ

  300x250 AD

  ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ  ವಾಯು ಗುಣಮಟ್ಟ ತೀವ್ರ ಕಳಪೆಯಾಗಿದ್ದು ಉಸಿರಾಡಲೂ ಕಷ್ಟಕರವಾದ ಸನ್ನಿವೇಶ ಎದುರಾಗಿದೆ. ಅಲ್ಲಿನ ವಾಯು ಗುಣಮಟ್ಟ ಸೂಚ್ಯಂಕ (AQI) 400 ಕ್ಕಿಂತ ಹೆಚ್ಚಾಗಿದ್ದು, ಇದು ದೆಹಲಿ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. AQI 400ಕ್ಕಿಂತ ಹೆಚ್ಚಾದರೆ ಹೆಚ್ಚು  ಅಪಾಯಕಾರಿ ಏಕೆಂದರೆ ಇದು ಆರೋಗ್ಯವಂತ ಜನರ ಮೇಲೆ ಪರಿಣಾಮ ಬೀರುತ್ತದೆ,  ರೋಗಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನೋಯ್ಡಾದ ಎಕ್ಯೂಐ 562 ರಷ್ಟಿದೆ.

  ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು, ಗೌತಮ್ ಬುದ್ಧ ನಗರದ ಶಾಲೆಗಳಲ್ಲಿ 1 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನವೆಂಬರ್ 8 ರವರೆಗೆ ನಡೆಸಲು ಆದೇಶಿಸಲಾಗಿದೆ.

  ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ವಿಷತ್ವ ಹೆಚ್ಚಳದ ಹಿನ್ನಲೆಯಲ್ಲಿ ಶಾಲೆಗಳನ್ನು ಮುಚ್ಚುವ ಮತ್ತು ಆನ್‌ಲೈನ್ ತರಗತಿಗಳಿಗೆ ಬದಲಾಯಿಸುವ ಕುರಿತು ದೆಹಲಿ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ, ಆದರೆ ಸಾಮಾಜಿಕ ಮಾಧ್ಯಮದಲ್ಲಿ ಪೋಷಕರು ಮತ್ತು ಪರಿಸರವಾದಿಗಳು ಶಾಲೆಗಳನ್ನು ಮುಚ್ಚಬೇಕೆಂದು ಒತ್ತಾಯಿಸುತ್ತಿದ್ದಾರೆ.

  300x250 AD

  “500+ AQI ಅನ್ನು ಉಸಿರಾಡುವುದು ಸಾಮಾನ್ಯವಲ್ಲ,  ಪ್ರತಿ ಮೂರನೇ ಒಂದು ಮಗುವಿಗೆ ಈಗಾಗಲೇ ಕೆಲವು ಶ್ವಾಸಕೋಶದ ಸವಾಲು ಇದೆ” ಎಂದು ಒಬ್ಬರು ಟ್ವಿಟ್‌ ಮಾಡಿದ್ದಾರೆ.

  ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ ಸಂಶೋಧನೆಗಳ ಪ್ರಕಾರ, ನಗರದ ಕೆಲವು ಕಡೆ ಸೂಚ್ಯಂಕವು 800 ಮೀರಿದೆ.

  Share This
  300x250 AD
  300x250 AD
  300x250 AD
  Back to top