ಶಿರಸಿ: ಹದಿನಾಲ್ಕರಿಂದ ಹದಿನೇಳು ವಯೋಮಾನದೊಳಗಿನ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ ಶಾಲಾ ವಿದ್ಯಾರ್ಥಿಗಳು ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯ ಬಾಲಕಿಯರ ಹಾಗೂ ಬಾಲಕರ ಎರಡೂ ತಂಡಗಳು ಬೆಳಗಾವಿ ತಂಡವನ್ನು ಸೋಲಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಬಾಲಕಿಯರ ವಿಭಾಗದಲ್ಲಿ ರಕ್ಷಾ ದಿನೇಶ ಹೆಗಡೆ, ನೇಹಾ ರಾಜು ನಾಯ್ಕ, ಶರಣ್ಯಾ ಹೆಗಡೆ, ಅಚಲಾ ಕಿರಣ್ ಕುಮಾರ್ ನಾಯ್ಕ ಪ್ರಥಮ ಸ್ಥಾನ ಪಡೆದು ಈ ಸಾಧನೆ ಮಾಡಿದ್ದಾರೆ.
ಹದಿನಾಲ್ಕು ವರ್ಷದೊಳಗಿನ ಸ್ಪರ್ಧೆಯಲ್ಲಿ ಕೂಡ ಬಾಲಕರ ಶಟಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ದಿಗಂತ್ ಹೆಗಡೆ ಬೆಳಗಾವಿ ವಿದ್ಯಾರ್ಥಿಯನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾನೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರೂ ಆದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಉಪಾಧ್ಯಕ್ಷ ಆರ್.ಡಿ.ಹೆಗಡೆ ಹಾಗೂ ಸದಸ್ಯರು, ಡಿಡಿಪಿಐ ಬಸವರಾಜ, ಬಿಇಓ ಎಂ.ಎಸ್.ಹೆಗಡೆ ಹಾಗೂ ಪ್ರಭಾರೆ ಉಪಪ್ರಚಾರ್ಯ ರಾಜೇಶ್ ವಿ ನಾಯ್ಕ, ದೈಹಿಕ ಶಿಕ್ಷಕರಾದ ಉದಯ ಶಿರಹಟ್ಟಿ, ಎಪಿ ಶ್ರೀನಿವಾಸ್, ಯಮುನಾ ನಾಯಕ್ ಮತ್ತು ಶಿಕ್ಷಕರ ವರ್ಗದವರು ಹರ್ಷ ವ್ಯಕ್ತಪಡಿಸಿ, ಮುಂದಿನ ಹಂತಕ್ಕೆ ಶುಭ ಕೋರಿದ್ದಾರೆ.