ಕಾರವಾರ: ಬಹುದಿನಗಳಿಂದ ಚರ್ಚೆಗೆ ಒಳಗಾಗಿದ್ದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೆಕರ್ ಅವರನ್ನು ವರ್ಗಾಯಿಸುವಲ್ಲಿ ಕಾಣದ ಕೈ ಇದೀಗ ಯಶಸ್ವಿಯಾಗಿದೆ.
ವರ್ಗಾವಣೆ ಕುರಿತಾಗಿ ರಾಜ್ಯ ಸರಕಾರ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಎಸ್ಪಿ ಸುಮನ್ ಅವರನ್ನು ಸಿಐಡಿ ಎಸ್ಪಿಯಾಗಿ ನೇಮಕ ಮಾಡಲಾಗಿದ್ದು, ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಎನ್. ವಿಷ್ಣುವರ್ಧನ್ ಅವರನ್ನು ಉತ್ತರ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಾಗಿ ಆದೇಶ ಮಾಡಲಾಗಿದೆ.
ಉತ್ತರ ಕನ್ನಡ ನೂತನ ಎಸ್ಪಿಯಾಗಿ ವಿಷ್ಣುವರ್ಧನ್: ಸುಮನ್ ಪೆನ್ನೆಕರ್ ಸಿಐಡಿಗೆ ವರ್ಗ
