ಕಾರವಾರ: ನಗರದ ಬಾಲಮಂದಿರ ಪ್ರೌಢಶಾಲೆಯಲ್ಲಿ ಸರದಾರ ವಲ್ಲಭಭಾಯಿ ಪಟೇಲ್ ಜನ್ಮದಿನೋತ್ಸವವನ್ನು ಆಚರಿಸಲಾಯಿತು.
ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಮಾತನಾಡಿ, ಮಹಾನ್ ಪುರುಷ ಸರದಾರ ವಲ್ಲಭಭಾಯಿ ಪಟೇಲ್‌ರು ಒಬ್ಬ ಸಮರ್ಥ ರಾಜಕಾರಣಿ, ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು. ಅವರು ತಮ್ಮ ಕ್ರಾಂತಿಕಾರಿ ಕೆಲಸಗಳಿಂದ ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಖ್ಯಾತರಾಗಿದ್ದಾರೆ ಎಂದು ನುಡಿದರು.
ಶಿಕ್ಷಕಿ ಸೀಮಾ ರೇವಣಕರ ಸ್ವಾಗತಿಸಿದರು. ವಿದ್ಯಾರ್ಥಿ ವಲ್ಲಭ ಗಾಯತ್ರಿ ಭಾಷಣ ಮಾಡಿದರು. ಶಿಕ್ಷಕರಾದ ನಜೀರುದ್ದೀನ್ ಸೈಯದ್, ರತ್ನಾಕರ ಮಡಿವಾಳ, ಭಾರತಿ ಐಸಾಕ್ ಮೊದಲಾದ ಶಿಕ್ಷಕ-ಶಿಕ್ಷಕಿಯರು, ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಕೊನೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ರತ್ನಾಕರ ಮಡಿವಾಳ ವಂದನಾರ್ಪಣೆ ಸಲ್ಲಿಸಿದರು. ನಂತರ ವಿದ್ಯಾರ್ಥಿಗಳಿಂದ ಏಕತಾ ಓಟ ನಡೆಸಲಾಯಿತು.