ಭಟ್ಕಳ: ಸಂಸ್ಕಾರ ಮನುಷ್ಯನಲ್ಲಿ ಅಮೂಲಾಗ್ರ ಬದಲಾವಣೆ ತಂದು ವ್ಯಕ್ತಿತ್ವವನ್ನು ರೂಪಿಸಿಕೊಡುತ್ತದೆ. ಸುಧಾ ಎನ್ನುವಂಥದ್ದು ಅಮೃತತ್ವದ ಸಂಕೇತವಾಗಿದೆ. ಮನುಷ್ಯನ ಬದುಕಿನಲ್ಲಿ ನಂಬಿಕೆಯು ಸಾಧನೆಯ ಎಲ್ಲಾ ಅಂಶಕ್ಕೂ ಆಧಾರವಾಗಿದ್ದು, ವಿದ್ಯಾರ್ಥಿಗಳಲ್ಲಿ ಬದಲಾವಣೆಗೆ ಕಾರಣವಾಗುತ್ತದೆ ಎಂದು ಯಲ್ಲಾಪುರದ ವಿಶ್ವದರ್ಶನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ದತ್ತಾತ್ರೇಯ ಗಾಂವ್ಕರ್ ಹೇಳಿದರು.
ಅವರು ಭಟ್ಕಳದ ಶ್ರೀಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನಲ್ಲಿ ನೈತಿಕ ಮೌಲ್ಯಗಳ ಶಿಕ್ಷಣ ಮಾಲಿಕೆ ಸಂಸ್ಕಾರ ಸುಧಾದ 6ನೇ ಸಂಚಿಕೆ, “ಬಾಳಿಗೊಂದು ನಂಬಿಕೆ” ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾಧ ಡಾ.ವೀರೇಂದ್ರ ವಿ.ಶ್ಯಾನಭಾಗ ಉಪಸ್ಥಿತರಿದ್ದರು. ಉಪನ್ಯಾಸಕ ಶಿವಾನಂದ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿದರು.