• first
  second
  third
  Slide
  Slide
  previous arrow
  next arrow
 • ವಿಜಯ- ಗುಣಸುಂದರಿ ಬಯಲಾಟ ಪ್ರಸಂಗ ಪ್ರದರ್ಶನ

  300x250 AD

  ಸಿದ್ದಾಪುರ: ತಾಲೂಕಿನ ಬೇಡ್ಕಣಿಯಲ್ಲಿ ಕೋಟೆ ಹನುಮಂತ ದೇವರ ವರ್ಷತೊಡಕಿನ ಪಲ್ಲಕ್ಕಿ ಉತ್ಸವ ನಡೆಯಿತು. ಬೆಳಿಗ್ಗೆ ಹನುಮಂತ ದೇವರ ಪಲ್ಲಕ್ಕಿ ಉತ್ಸವ ಮನೆಮನೆಗೆ ತೆರಳಿ ಪೂಜಿಸಲ್ಪಟ್ಟಿತು. ಸಂಜೆ ಪ್ರತಿವರ್ಷದಂತೆ ಶ್ರೀಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ಬೇಡ್ಕಣಿ ಇವರಿಂದ ಯಕ್ಷಗಾನ ಬಯಲಾಟ ಏರ್ಪಡಿಸಲಾಗಿತ್ತು.

  ಈ ಸಂದರ್ದಲ್ಲಿ ಯಕ್ಷಗಾನ ಮಂಡಳಿಯ ಮುಖ್ಯಸ್ಥ ಲಕ್ಷ್ಮಣ ನಾಯ್ಕ ಮಾತನಾಡಿ, ತಮ್ಮ ಸಹೋದರ ಕೃಷ್ಣಾ ಜಿ.ಬೇಡ್ಕಣಿ ಮರುಹುಟ್ಟು ನೀಡಿದ ಈ ಮಂಡಳಿ ಇಂದು 26ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. 25ರ ಸಂಭ್ರಮವನ್ನು ಒಂದು ಹಬ್ಬದಂತೆ ಆಚರಿಸಬೇಕಿದೆ. ಅದಕ್ಕೆ ಕಲಾಭಿಮಾನಿಗಳ ಸಹಕಾರ ಬೇಕು ಎಂದರು.

  300x250 AD

  ನಂತರ ಪಾಪಣ್ಣ ವಿಜಯ- ಗುಣಸುಂದರಿ ಎಂಬ ಪ್ರಸಂಗವನ್ನು ಬಯಲಾಟವಾಗಿ ಪ್ರದರ್ಶಿಸಲಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕೃಷ್ಣ ಮರಾಠೆ, ಗಣಪತಿ ಭಟ್ಟ ಭರತೋಟ, ಮೃದಂಗದಲ್ಲಿ ವಿಠ್ಠಲ ಪೂಜಾರಿ ಮಂಚಿಕೇರಿ, ಚಂಡೆಯಲ್ಲಿ ಕೃಷ್ಣಮೂರ್ತಿ ನಾಗರಕೊಡಗಿ ಹಾಗೂ ಪಾತ್ರಧಾರಿಗಳಾಗಿ ಉಗ್ರಸೇನದಲ್ಲಿ ಶ್ರೀಕಾಂತ ಹೆಗಡೆ ಹೆಗ್ಗೋಡು, ಹೇಮಸುಂದರಿ ಪುರುಷೋತ್ತಮ ನಾಯ್ಕ ಮಂಜಿನಕಾನು, ರೂಪಸುಂದರಿಯಲ್ಲಿ ಗಿರಿಧರ ನಾಯ್ಕ, ಗುಣಸುಂದರಿ ಕನ್ನಪ್ಪ ಮಾಸ್ತರ್ ತಡಗಳಲೆ, ದೂತ ವೆಂಕಟ್ರಮಣ ಹೆಗಡೆ ಮಾದ್ನಕಳ, ಪಾಪಣ್ಣ ಕೃಷ್ಣಾ ಜಿ.ಬೇಡ್ಕಣಿ, ದುರ್ಮುಖನಾಗಿ ಪ್ರಣವ್ ಭಟ್ ಸಿದ್ದಾಪುರ, ದುರ್ಮತಿಯಾಗಿ ಮಂಜುನಾಥ ಶೆಟ್ಟಿ ಕಾಳೆನಳ್ಳಿ, ಚಂದ್ರಸೇನನಾಗಿ ವಿನಾಯಕ ಮಾಸ್ತರ್ ಕೂಜಳ್ಳಿ, ಯಕ್ಷಿಣಿಯಾಗಿ ಸದಾನಂದ ಪಟಗಾರ ಶಿರಸಿ, ಕುಬೇರನಾಗಿ ಲಕ್ಷ್ಮೀನಾರಾಯಣ ಹೆಗಡೆ ಶಿರಗುಣಿ, ಈಶ್ವರನಾಗಿ ಶಿವು ಶಿರಳಗಿ, ಬಲ್ಲೂಕನಾಗಿ ಜನಾರ್ಧನ ಹಾರ್ಸಿಕಟ್ಟಾ ಸುಂದರ ಪ್ರದರ್ಶನ ನೀಡಿದರು.

  Share This
  300x250 AD
  300x250 AD
  300x250 AD
  Back to top