• Slide
  Slide
  Slide
  previous arrow
  next arrow
 • ಅಂಕೋಲಾ ಬೆಳೆಗಾರರ ಸಮಿತಿಯಿಂದ ಸ್ವಾತಂತ್ರ‍್ಯ ಹೋರಾಟಗಾರರ ಕುಟುಂಬಗಳಿಗೆ ಸನ್ಮಾನ

  300x250 AD

  ಅಂಕೋಲಾ: ಇಲ್ಲಿನ ಅಂಕೋಲಾ ಬೆಳೆಗಾರರ ಸಮಿತಿ ವತಿಯಿಂದ ಅಗಸೂರ ಗ್ರಾಮದಲ್ಲಿ ಸ್ವಾತಂತ್ರ‍್ಯ ಹೋರಾಟಗಾರರ ಕುಟುಂಬದವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.

  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಸ್ವಾತಂತ್ರ‍್ಯ ಯೋಧರನ್ನು ನೆನೆಸಿಕೊಂಡು ಅವರ ಕುಟುಂಬದವರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಾಲಚಂದ್ರ ನಾಯಕ ಮಾತನಾಡಿ, ಬೆಳೆಗಾರರ ಸಂಘ ಏರ್ಪಡಿಸಿರುವ ಈ ಕಾರ್ಯಕ್ರಮ ಶ್ಲಾಘನಿಯ ಎಂದರು.

  ಗೋಪಾಲ ನಾಯಕ ಅಡ್ಲೂರ ಬೆಳೆಗಾರರ ಸಂಘಕ್ಕೆ ಅದ್ಭುತ ಕನಸು ಕಾಣುವ ಶಕ್ತಿ ಇದೆಯೆಂದರು. ತುಳಸು ಗೌಡ, ನಿರ್ಮಲಾ ನಾಯಕ, ವಿನಾಯಕ ಮೊಗಟ ವೇದಿಕೆಯ ಮೇಲಿದ್ದರು. ಸ್ವಾತಂತ್ರ‍್ಯ ಹೋರಾಟಗಾರರಾದ ದಿ.ಹೊನ್ನಮ್ಮ ನಾಯಕ, ದಿ.ಸಾತಮ್ಮ ನಾಯಕರವರ ಕುಟುಂಬದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.

  300x250 AD

  ಬೆಳೆಗಾರರ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಹೆಗಡೆ ಪ್ರಾಸ್ತಾವಿಕ ಮಾತನಾಡಿದರೆ, ಶಂಕರ ಗೌಡ ಅಡ್ಲೂರ ಸ್ವಾಗತಿಸಿದರು. ಪ್ರಕಾಶ ಅಂಕೋಲೆಕರ ವಂದಿಸಿದರು. ಕಿರಾ ಗೌಡ, ಮಂಜುನಾಥ ನಾಯಕ, ರಾಮಚಂದ್ರ ಗೌಡ, ಸಂಜೀವ ಗುನಗಾ, ಚಂದ್ರ ಗೌಡ, ರಾಜೇಶ ಮಂದಾರ, ಶ್ರೀಮತಿ ಆಚಾರಿ, ವಿಜಯ ನಾಯಕ, ರಾಮ ನಾಯಕ ಹುಲಿದೇವರವಾಡ, ನಾರಾಯಣ ಸೂರ್ವೆ, ಮಂಜು ಗುನಗಾ ಮುಂತಾದ ಪ್ರಮುಖರು ಭಾಗವಹಿಸಿದ್ದರು. ದಿನದಿಂದ ದಿನಕ್ಕೆ ಸ್ವಾತಂತ್ರ‍್ಯ ಹೋರಾಟಗಾರರ ಕುಟುಂಬದವರನ್ನು ಗೌರವಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top