Slide
Slide
Slide
previous arrow
next arrow

ಕನ್ನಡವನ್ನು ಬೆಳೆಸುವುದು, ಉಳಿಸುವುದು ಕನ್ನಡ ನಾಡಿನಲ್ಲಿ ಹುಟ್ಟಿದ ನಮ್ಮೆಲ್ಲರ ಕರ್ತವ್ಯವಾಗಿದೆ : ಶೈಲೇಶ ಪರಮಾನಂದ

300x250 AD

ಜೊಯಿಡಾ: ತಾಲೂಕಿನಾದ್ಯಂತ ಸಂಭ್ರಮ ಸಡಗರದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ತಹಶೀಲ್ದಾರ ಶೈಲೇಶ ಪರಮಾನಂದ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಪ್ಪ ನಮನವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡವನ್ನು ಬೆಳೆಸುವುದು, ಉಳಿಸುವುದು ಕನ್ನಡ ನಾಡಿನಲ್ಲಿ ಹುಟ್ಟಿದ ನಮ್ಮೆಲ್ಲರ ಕರ್ತವ್ಯವಾಗಿದೆ. ಎಲ್ಲರೂ ಕನ್ನಡ ಭಾಷೆಯಲ್ಲಿಯೇ ಮಾತನಾಡುವುದರ ಮೂಲಕ ಆಡಳಿತದಲ್ಲಿಯೂ ಕನ್ನಡವನ್ನು ಬಳಸೋಣ ಎಂದರು.

ಈ ಸಂದರ್ಭದಲ್ಲಿ ಜೊಯಿಡಾ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಂದ ಕನ್ನಡ ನಾಡು- ನುಡಿ, ರಾಜ್ಯದ ವಿಶೇಷತೆಗಳ ಸಾರುವ ಸ್ಥಬ್ದ ಚಿತ್ರಗಳ ಮೆರವಣಿಗೆ ನಡೆಯಿತು. ಕಾಲೇಜು ವಿದ್ಯಾರ್ಥಿಗಳಿಂದ ಪುನೀತ ರಾಜಕುಮಾರ ಅವರ ಸವಿ ನೆನಪಿಗಾಗಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಕೊನೆಯ ಚಿತ್ರ ಗಂಧದ ಗುಡಿ ಚಲನಚಿತ್ರದ ತುಣುಕಾದ ತಾಲೂಕಿನ ಸುಗ್ಗಿ ಕುಣಿತವನ್ನು ಪ್ರದರ್ಶಿಸಲಾಯಿತು.

300x250 AD

ಶಾಲಾ ಮಕ್ಕಳಿಂದ ಕನ್ನಡ ಧ್ವಜದ ಮೆರವಣಿಗೆ ನಡೆಯಿತು. ವೇದಿಕೆಯಲ್ಲಿ ಗಣ್ಯರಾದ ಸದಾನಂದ ದಬ್ಗಾರ್, ರಮೇಶ ನಾಯ್ಕ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಶೇಖ್, ಜೋಯಿಡಾ ಗ್ರಾ.ಪಂ.ಅಧ್ಯಕ್ಷ ಅರುಣ ಕಾಂಬ್ರೆಕರ, ಡಾ.ಸುಜಾತಾ ಉಕ್ಕಲಿ, ಜೋಯಿಡಾ ಸಿ.ಪಿ.ಐ ನಿತ್ಯಾನಂದ ಪಂಡಿತ್, ಜೋಯಿಡಾ ಕ.ಸಾ.ಪ ಅಧ್ಯಕ್ಷ ಪಾಂಡುರಂಗ ಪಟಗಾರ,ಇತರ ಇಲಾಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top