Slide
Slide
Slide
previous arrow
next arrow

ಕನ್ನಡ ನಾಡು-ನುಡಿಯ ರಕ್ಷಣೆಗೆ ಪ್ರತಿಯೊಬ್ಬರು ಕಂಕಣ ಬದ್ಧರಾಗಬೇಕಿದೆ :ಪಿ.ಕೇಣಿ

300x250 AD

ಅಂಕೋಲಾ: ತಾಲೂಕಿನ ಬೇಲೆಕೇರಿ ಖಾರ್ವಿವಾಡೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನವು ಗ್ರಾಮದಲ್ಲಿ ನಡೆಯಿತು. ವಿವಿಧ ರೂಪಕಗಳು ಮೆರವಣೆಯಲ್ಲಿ ಗಮನ ಸೆಳೆದವು. ಕನ್ನಡಾಂಬೆಗೆ ಜೈ ಘೋಷವನ್ನು ಹಾಕುತ್ತಾ ಮೆರವಣಿಗೆಯು ಸಾಗಿತು.

ಮೆರವಣಿಗೆಗೆ ಚಾಲನೆ ನೀಡಿದ ಮುಖ್ಯಾಧ್ಯಾಪಕ ಮಧುಕರ ಪಿ.ಕೇಣಿ ಮಾತನಾಡಿ, ಕನ್ನಡ ನಾಡು-ನುಡಿಯ ರಕ್ಷಣೆಗೆ ಪ್ರತಿಯೊಬ್ಬರು ಕಂಕಣ ಬದ್ಧರಾಗಬೇಕಿದೆ. ಕಳೆದ 25 ವರ್ಷಗಳಿಂದ ಶೇ 99ರಷ್ಟು ಕೊಂಕಣಿ ಭಾಷಿಕರೆ ಹೊಂದಿರುವ ಈ ಭಾಗದಲ್ಲಿ ವೈಭವೋಪೇತವಾಗಿ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವದು ನಮ್ಮೆಲ್ಲರಲ್ಲಿ ಹೆಮ್ಮೆ ತಂದಿದೆ ಎಂದರು.

ಎಸ್.ಡಿ.ಎಂ .ಸಿ. ಅಧ್ಯಕ್ಷ ವಿಶ್ವನಾಥ ಗುರುದಾಸ ಬಾನಾವಳಿಕರ, ಮಾಜಿ ಅಧ್ಯಕ್ಷರಾದ ರಮಾಕಾಂತ ಬಾನಾವಳಿಕರ, ಸಂತೋಷ ಬಾನಾವಳಿಕರ, ಶಿಕ್ಷಕರಾದ ಚಂದ್ರಕಲಾ ಜಿ. ನಾಯಕ, ರೇಖಾ ಎಸ್. ನಾಯ್ಕ, ಮಾಲತಿ ಜಿ. ನಾಯಕ, ಚಿತ್ರಾ ಜಿ. ದೇಶಭಂಡಾರಿ, ವೆಂಕಟರಮಣ ಎನ್. ನಾಯಕ, ಪ್ರೇಮಾ ಆರ್. ಗಾಂವಕರ, ಶ್ಯಾಮಲಾ ಎಸ್. ನಾಯ್ಕ ಸೇರಿದಂತೆ ಇನ್ನಿತರ ಎಸ್.ಡಿ.ಎಂ.ಸಿ ಸದಸ್ಯರುಗಳು, ಊರ ನಾಗರಿಕರು ಉಪಸ್ಥಿತರಿದ್ದರು.

300x250 AD

ಮೆರವಣಿಗೆ ರಿಕ್ಷಾ ಮಾಲಕರು ಹಾಗೂ ಚಾಲಕರು ತಮ್ಮ ವಾಹನೊಂದಿಗೆ ಮೆರವಣಿಗೆಗೆಯಲ್ಲಿ ಸಾಗಿ ಗಮನ ಸೆಳೆದರು. ಬೇಲೆಕೇರಿಯ ಮೀನುಗಾರರು ಯೂನಿಯನ್‌ನವರು ತಮ್ಮ ಕೊಡುಗೆ ಪ್ರಕಟಿದರು.

Share This
300x250 AD
300x250 AD
300x250 AD
Back to top