• Slide
    Slide
    Slide
    previous arrow
    next arrow
  • ಬೊಮ್ಮಾ ನಾಗಪ್ಪ ನಾಯಕನಿಧನ

    300x250 AD

    ಗೋಕರ್ಣ: ಇಲ್ಲಿನ ಹಿರೇಗುತ್ತಿ ಸಮೀಪದ ಮೊರಬಾದ ನಿವಾಸಿ ಬೊಮ್ಮಾ ನಾಗಪ್ಪ ನಾಯಕ ಮುದ್ದನಾಯ್ಕನ ಮನೆ (83) ಇತ್ತೀಚಿಗೆ ನಿಧನರಾದರು.
    ಮೃತರು ಹನುಮಂತ ನಾಯಕ, ನಾರಾಯಣ ನಾಯಕ ಇಬ್ಬರು ಪುತ್ರರು ಹಾಗೂ ದೇವಮ್ಮ, ಜಾನಕಿ ಈರ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೊರಬಾ ಊರಿನ ಜನರಿಗೆಲ್ಲ ಪ್ರೀತಿಯ ಬೊಮ್ಮಕ್ಕನಾಗಿದ್ದಳು.
    ಜಿಲ್ಲಾ ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಹೊನ್ನಪ್ಪ ಎನ್.ನಾಯಕ, ಬಾಲಚಂದ್ರ ಹೆಗಡೆಕರ್, ಹಿರೇಗುತ್ತಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಾಂತಾ ಎನ್.ನಾಯಕ, ಬಾವಿಕೇರಿಯ ಜನಪ್ರತಿನಿಧಿ ಉದಯ ನಾಯಕ, ರಾಮು ಹಿರೇಗುತ್ತಿ, ಸುಂಕಸಾಳ ಗ್ರಾಮ ಪಂಚಾಯತ ಅಧ್ಯಕ್ಷ ಸದಾನಂದ ನಾಯಕ, ತೊರ್ಕೆ ಗ್ರಾಮ ಪಂಚಾಯತ ಸದಸ್ಯ ಮಹೇಶ ನಾಯಕ, ನೀಲಕಂಠ ಎನ್.ನಾಯಕ, ರಾಮದಾಸ ನಾಯಕ, ನಾಗರಾಜ ನಾಯಕ, ಆನಂದ ನಾಯಕ, ಮಹೇಶ ನಾಯಕ ಮೊರಬಾ, ನಾರಾಯಣ ನಾಯಕ ಬರ್ಗಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top