ಅಂಕೋಲಾ : ಇದೇ ದಿನಾಂಕ ಅಕ್ಟೋಬರ್ 30 ರಂದು ಸರಕಾರಿ ಪ್ರೌಢಶಾಲೆ ಅಚವೆಯಲ್ಲಿ ಜಸ್ಟೀಸ್ ಕೆ.ಎಸ್. ಹೆಗಡೆ ಆಸ್ಪತ್ರೆ ಮಂಗಳೂರು ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಜರುಗಿಸಲಾಯಿತು. ಶಿಬಿರದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಜಿ.ಎಂ. ಶೆಟ್ಟಿಯವರು ದೀಪವನ್ನು ಬೆಳಗಿಸಿ, ಕಾರ್ಯಕ್ರಮ ಉದ್ಘಾಟಿಸುತ್ತ ಇಂದು ನಮ್ಮ ಊರಿಗೆ ಕೆ.ಎಸ್. ಹೆಗಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಆಗಮಿಸಿರುವುದು ಸಂತೋಷದ ಸಂಗತಿಯಾಗಿದೆ. ಈ ದಿಶೆಯಲ್ಲಿ ಜಾಗೃತಿ ಸಂಘದ ಕಾರ್ಯದರ್ಶಿ ಬಾಲಚಂದ್ರ ಶೆಟ್ಟಿ ಹಾಗೂ ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿಯವರ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಚವೆ ಪಂಚಾಯತ ಅಧ್ಯಕ್ಷರಾದ ಶ್ರೀದೇವಿ ಪಟಗಾರ ಅವರು ತಮ್ಮ ಅಧ್ಯಕ್ಷತೆಯ ಭಾಷಣದಲ್ಲಿ ಪ್ರತಿವರ್ಷವೂ ಕೆ.ಎಸ್.ಹೆಗಡೆ ಆಸ್ಪತ್ರೆಯ ತಂಡ ನಮ್ಮ ಊರಿಗೆ ಬರುವಂತಾಗಲಿ ಎಂದು ಆಶಿಸಿದರು.
ಕಾರ್ಯಕ್ರಮ ಸಂಘಟಕ ಜಾಗೃತಿ ಸಂಘದ ಕಾರ್ಯದರ್ಶಿ ಹಾಗೂ ಅಚವೆ ಪಂಚಾಯತನ ಉಪಾಧ್ಯಕ್ಷರಾದ ಬಾಲಚಂದ್ರ ಶೆಟ್ಟಿಯವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷರಾದ ರವಿಂದ್ರ ಶೆಟ್ಟಿಯವರು ವಂದಿಸಿದರು. ಕಾರ್ಯಕ್ರಮದಲ್ಲಿ ಕೆ.ಎಸ್.ಹೆಗಡೆ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ರೋಹಿತ್ ಹೊಳ್ಳಾರವರು ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಡಾ. ಚರೀತ್ ಶೆಟ್ಟಿ, ಡಾ. ನಿರ್ಮಲ್ ಬಾಬು, ಡಾ. ಶುಹೈಬ್ ಅಹಮದ್, ಡಾ. ಪ್ರತೀಕ್ಷಾ ಹೆಚ್.ಎಲ್ ಹಾಗೂ ಶಾಲಾ ಮುಖ್ಯಾಧ್ಯಾಪಕರಾದ ವಿ.ಟಿ. ನಾಯಕ, ಶಾಂತಾರಾಮ ಗಾಂವಕರ ಅವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವು ಸಂಗಮ ಸೇವಾ ಸಂಸ್ಥೆ ಅಂಕೋಲಾ ಜಾಗೃತಿ ಸಂಘ ಕುಂಟಕಣಿ, ಕದಂಬ ಫೌಂಡೇಶನ್ ಶಿರಸಿ, ಗ್ರಾಮ ಪಂಚಾಯತ ಅಚವೆ ಇವರೆಲ್ಲರ ಸಂಯುಕ್ತ ಆಶ್ರಯದಲ್ಲಿ ಜರುಗಿತು. ಈ ಶಿಬಿರದಲ್ಲಿ 344 ಜನ ತಪಾಸಣೆ ಮಾಡಿಕೊಂಡರು.