Slide
Slide
Slide
previous arrow
next arrow

ಹೊಲನಗದ್ದೆ ಶಾಲೆಯಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ

300x250 AD

ಕುಮಟಾ: ತಾಲೂಕಿನ ಹೊಲನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಕನ್ನಡ ಬಾವುಟದ ಬಣ್ಣಗಳನ್ನು ಪ್ರತಿನಿಧಿಸುವ ಉಡುಗೆಯಲ್ಲಿ ಭಾಗವಹಿಸಿದ್ದ ಶಾಲಾ ವಿದ್ಯಾರ್ಥಿಗಳು ಕನ್ನಡ ಗೀತೆಗೆ ನೃತ್ಯ ಮಾಡುವ ಮೂಲಕ ಗಮನಸೆಳೆದರು. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಮಹಾಕವಿ ಪಂಪ ಮುಂತಾದ ವೈವಿಧ್ಯಮಯ ವೇಷದಲ್ಲಿ ಮಕ್ಕಳು ಸಂಭ್ರಮಿಸಿದರು.

300x250 AD

ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಚಂದ್ರಹಾಸ ನಾಯ್ಕ, ಗ್ರಾಮ ಪಂಚಾಯತ ಹಾಗೂ ಎಸ್.ಡಿ.ಎಮ್.ಸಿ.ಸದಸ್ಯರಾದ ಮಹಾಂತೇಶ ಹರಿಕಂತ್ರ, ಮುಖ್ಯಾಧ್ಯಾಪಕರಾದ ಜಯಶ್ರೀ ಪಟಗಾರ, ಶಿಕ್ಷಕರಾದ ಶೋಭಾ ಭಟ್ಟ, ವೀಣಾ ನಾಯ್ಕ, ಮಂಗಲಾ ನಾಯ್ಕ, ಶ್ಯಾಮಲಾ ಎಮ್ ಪಟಗಾರ, ಶ್ಯಾಮಲಾ ಬಿ ಪಟಗಾರ, ದೀಪಾ ನಾಯ್ಕ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಎಸ್.ಡಿ.ಎಮ್.ಸಿ.ಸದಸ್ಯರು, ಊರ ನಾಗರಿಕರು ಉಪಸ್ಥಿತರಿದ್ದರು. ರವೀಂದ್ರ ಭಟ್ಟ ಸೂರಿ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top