• first
  second
  third
  Slide
  Slide
  previous arrow
  next arrow
 • 16 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

  300x250 AD

  ಕಾರವಾರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ 16 ಮಂದಿಯನ್ನ ಆಯ್ಕೆ ಮಾಡಿ ಜಿಲ್ಲಾಡಳಿತ ರಾಜ್ಯೋತ್ಸವದ ಮುನ್ನಾ ದಿನವಾದ ಸೋಮವಾರ ಬಿಡುಗಡೆ ಮಾಡಿದೆ.
  ಕ್ರೀಡಾ ಕ್ಷೇತ್ರದಲ್ಲಿ ಕುಮಟಾದ ವೆಂಕಟೇಶ ಪ್ರಭು, ಹಳಿಯಾಳದ ತುಕಾರಾಮ್ ಗೌಡ, ಕಾರವಾರದ ಪ್ರಕಾಶ್ ರೇವಣಕರ್, ಯಕ್ಷಗಾನದಲ್ಲಿ ಕುಮಟಾದ ಸುಕ್ರಪ್ಪ ನಾಯ್ಕ, ಸಿದ್ದಾಪುರದ ಅಶೋಕ ಭಟ್, ಸಮಾಜ ಸೇವೆ ವಿಭಾಗದಲ್ಲಿ ಕಾರವಾರದ ಬಾಬು ಅಂಬಿಗ ಅವರನ್ನ ಆಯ್ಕೆ ಮಾಡಲಾಗಿದೆ.
  ಸಾಹಿತ್ಯದಲ್ಲಿ ಶಿರಸಿಯ ಭಾಗೀರಥಿ ಹೆಗಡೆ, ಜಾನಪದದಲ್ಲಿ ಹೊನ್ನಾವರದ ಶಾರದಾ ಮೊಗೇರ, ಶಿರಸಿಯ ಗುಡ್ಡಪ್ಪ ಜೋಗಿ, ರಂಗಭೂಮಿಯಲ್ಲಿ ಭಟ್ಕಳದ ಅಶೋಕ ಮಹಾಲೆ, ಕಲೆಯಲ್ಲಿ ದಾಂಡೇಲಿಯ ದುಂಡಪ್ಪ ಗೂಳೂರ, ಪತ್ರಿಕೋದ್ಯಮದಲ್ಲಿ ಮುಂಡಗೋಡದ ಹಿರಿಯ ಪತ್ರಕರ್ತ ಪಿ.ಎಸ್.ಸದಾನಂದ, ವೈದ್ಯಕೀಯದಲ್ಲಿ ಕುಮಟಾದ ಡಾ.ದೀಪಕ ನಾಯಕ, ಶಿಕ್ಷಣದಲ್ಲಿ ಅಂಕೋಲಾದ ಮಹೇಶ ನಾಯಕ, ಯು.ಎಂ.ಶಿರ್ಸಿಕರ್, ಪರಿಸರ ಕ್ಷೇತ್ರದಲ್ಲಿ ಕುಮಟಾದ ಎಲ್.ಆರ್.ಹೆಗಡೆ ಅವರನ್ನ ಆಯ್ಕೆ ಮಾಡಲಾಗಿದೆ.
  ಇಂದು ನಗರದಲ್ಲಿ ನಡೆಯಲಿರುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

  300x250 AD
  Share This
  300x250 AD
  300x250 AD
  300x250 AD
  Back to top