Slide
Slide
Slide
previous arrow
next arrow

ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ; ಗ್ರಾಮಸ್ಥರ ವಿರೋಧ

300x250 AD


ಭಟ್ಕಳ: ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ 150 ಮೀ. ರಸ್ತೆ ನಿರ್ಮಿಸಲಾಗಿದ್ದು, ಇದರಿಂದ ಕೃಷಿ ಭೂಮಿಗಳಿಗೆ ಹಾನಿಯಾಗಲಿದೆ ಎಂದು ತಾಲೂಕಿನ ತಲಗೋಡ ಕೋಟಿಮನೆ ಭಾಗದ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ರಸ್ತೆ ಮುಚ್ಚಿಸುವಂತೆ ಅರಣ್ಯ ಅಧಿಕಾರಿಗಳನ್ನು ಆಗ್ರಹಿಸಿದರು.
ಕಾರ್ಗದ್ದೆ ನಿವಾಸಿಯೋರ್ವರು ತಲಗೋಡ ಕೋಟಿಮನೆ ಭಾಗದಲ್ಲಿ ಅರಣ್ಯ ಪ್ರದೇಶದ ಅಂದಾಜು 150 ಮೀ. ವ್ಯಾಪ್ತಿಯ ಮರಗಳನ್ನು ಕಡಿದು ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿಕೊಂಡಿದ್ದು, ಈ ರಸ್ತೆಯನ್ನು ಅವರು ಮಣ್ಣು ಲಾರಿಯ ಸಾಗಾಟಕ್ಕಾಗಿ ನಿರ್ಮಾಣ ಮಾಡಿಕೊಂಡಿದ್ದಾರೆ ಎನ್ನುವುದು ಸ್ಥಳೀಯರ ಆರೋಪ. ಖಾಸಗಿ ವ್ಯಕ್ತಿಯ ಮಾಲ್ಕಿ ಜಮೀನಿಗೆ ತೆರಳಲು ಎರಡು ಪರ್ಯಾಯ ಮಾರ್ಗಗಳಿವೆ. ಆದರೂ ಈ ಮಾರ್ಗವನ್ನು ನಿರ್ಮಾಣ ಮಾಡಿದ್ದಾರೆ. ಈ ಭಾಗದಲ್ಲಿ ಅಂದಾಜು 500 ಎಕರೆ ಕೃಷಿ ಭೂಮಿ ಇದೆ. ಮಣ್ಣು ಲಾರಿಗಳು ತಿರುಗಾಟ ನಡೆಸಿದರೆ ಇಲ್ಲಿನ ಕೃಷಿ ಭೂಮಿಗೆ ಹಾನಿಯಾಗುತ್ತದೆ. ಅರಣ್ಯ ಅಧಿಕಾರಿಗಳು ಈ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸ್ಥಳೀಯರಾದ ಪ್ರಕಾಶ ನಾಯ್ಕ ಆಗ್ರಹಿಸಿದರು.
ಈ ಬಗ್ಗೆ ಆರ್‌ಎಫ್‌ಒ ಶರತ್ ಶೆಟ್ಟಿ ಪ್ರತಿಕ್ರಿಯಿಸಿದ್ದು, ಪರವಾನಗಿ ಪಡೆಯದೆ ಅನಧಿಕೃತವಾಗಿ ಮರ ಕಡಿದು ರಸ್ತೆ ನಿರ್ಮಿಸಿದ ವೆಂಕಟ್ರಮಣ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ನಿರ್ಮಾಣ ಮಾಡಿರುವ ರಸ್ತೆಗೆ ಹೊಂಡ ತೆಗೆದು ವಾಹನಗಳು ದಾಟದಂತೆ ನಿರ್ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೇಶವ ನಾಯ್ಕ, ಭಾಸ್ಕರ ನಾಯ್ಕ, ಮಂಜುನಾಥ ನಾಯ್ಕ, ಮೋಹನ್ ನಾಯ್ಕ, ರಾಮದಾಸ ನಾಯ್ಕ, ಲೋಕೇಶ್ ನಾಯ್ಕ, ನಾಗರಾಜ್ ನಾಯ್ಕ ಮುಂತಾದವರು ಇದ್ದರ

300x250 AD

Share This
300x250 AD
300x250 AD
300x250 AD
Back to top