Slide
Slide
Slide
previous arrow
next arrow

ಸಂದೀಪ್‌ಕುಮಾರ್ ಬೊಬಾಟೆ ಬಂಧನಕ್ಕೆ ಒತ್ತಾಯ

300x250 AD

ಜೊಯಿಡಾ: ಅ.29ರಂದು ಕಬ್ಬು ಬೆಳೆಗಾರರ ಜಿಲ್ಲಾಧ್ಯಕ್ಷ ಸಂದೀಪ್‌ಕುಮಾರ್ ಬೊಬಾಟೆ ಮಾಜಿ ಶಾಸಕ ಸುನೀಲ್ ಹೆಗಡೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಬೊಬಾಟೆಯನ್ನು ಬಂಧಿಸಬೇಕೆಂದು ರಾಮನಗರ ಭಾಗದ ಬಿಜೆಪಿ ಮುಖಂಡರು ರಾಮನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ.
ಬೊಬಾಟೆ ನಮ್ಮ ನಾಯಕ ಸುನೀಲ ಹೆಗಡೆ ಅವರಿಗೆ ಅವಾಚ್ಯವಾಗಿ ಬೈದು ಅವರ ಘನತೆಗೆ ಧಕ್ಕೆ ತಂದಿದ್ದಾರೆ. ಇದರಿಂದ ನಮ್ಮ ನಾಯಕರಿಗೆ ಹಾಗೂ ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ಈ ಕಾರಣದಿಂದ ಕೂಡಲೇ ಬೊಬಾಟೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಮನಗರ ಭಾಗದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುತ್ತದೆ ಬಿಜಿಪಿ ಮುಖಂಡರಾದ ಶಿವಾಜಿ ಗೋಸಾವಿ, ಗುರಪ್ಪ ಹಣಬರ, ಗಿರೀಶ್ ಗೋಸಾವಿ ಮನವಿ ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top